ಬೆಂಗಳೂರು : ಇತ್ತೀಚೆಗೆ ಹೆಚ್ಚಿನ ಜನರು ಕ್ಯಾನ್ಸರ್ ರೋಗದಿಂದ ನರಳುತ್ತಿದ್ದಾರೆ. ಅದರಲ್ಲೂ ಚಿಕ್ಕಮಕ್ಕಳು ಹೆಚ್ಚಾಗಿ ಈ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಅಮೇರಿಕಾದ ವೈದ್ಯರ ಸಂಘಟನೆಯೊಂದು ಕ್ಯಾನ್ಸರ್ ವ್ಯಾಧಿ ಹೇಗೆಲ್ಲಾ ಹರಡುತ್ತದೆ ಎಂಬುದರ ಬಗ್ಗೆ ಉತ್ತರ ಕಂಡುಕೊಂಡಿದ್ದಾರೆ.
ಪ್ಲಾಸ್ಟಿಕ್ ಕಪ್ ಗಳಲ್ಲಿ ಬಿಸಿ ಬಿಸಿ ಕಾಫಿ/ಚಹಾ ಹಾಗೂ ತಿಂಡಿ ತಿನಿಸುಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುತ್ತದೆ. ಹಾಗೇ ಮೈಕ್ರೋ ವೇವ್ ನಂತಹ ಆಹಾರ ಪದಾರ್ಥಗಳನ್ನು ಬಿಸಿ ಮಾಡುವ ಉಪಕರಣಗಳಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿಟ್ಟಾಗ ಅದು ರಾಸಾಯನಿಕವನ್ನು ಉತ್ಪಾದಿಸುತ್ತದೆ. ಇದು 52 ಬಗೆಯ ಕ್ಯಾನ್ಸರ್ ರೋಗವನ್ನು ಉಂಟು ಮಾಡುತ್ತದೆ.