ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಮೊಟ್ಟೆ ಬೆಲೆ

ಗುರುವಾರ, 1 ಜೂನ್ 2023 (18:24 IST)
ಮೊಟ್ಟೆ  ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ, ಬಹುತೇಕರು ಮೊಟ್ಟೆ ತಿನ್ನೋರೆ. ಅದ್ರಲ್ಲೂ ಸಸ್ಯಹಾರಿಗಳೇ ಹೆಚ್ಚು ಮೊಟ್ಟೆಯ ಮೇಲೆ ಅವಲಂಭಿತರಾಗಿರ್ತಾರೆ. ಆದ್ರೆ ಮೊಟ್ಟೆ ಬೆಲೆ ದಿನ ದಿಂದ ದಿನಕ್ಕೆ ಏರಿಕೆ ಆಗ್ತಾನೆ ಇದೆ.ರಾಜ್ಯದಲ್ಲಿ ಮೊಟ್ಟೆ ಸೇವಿಸುವವರ ಸಂಖ್ಯೆ ಹೆಚ್ಚಾದಂತೆ ಮೊಟ್ಟೆ ಬೆಲೆಯೂ ಕೂಡ ಹೆಚ್ಚಾಗ್ತಾನೆ ಇದೆ, ಅದ್ರಲ್ಲೂ 
ಸಸ್ಯಾಹಾರಿಗಳೂ ಮೊಟ್ಟೆ ತಿನ್ನಬಹುದು ಎಂಬ ವೈಜ್ಞಾನಿಕ ಅಭಿಪ್ರಾಯ ಸೃಷ್ಟಿಯಾದ ಮೇಲಂತೂ  ಮೊಟ್ಟೆ ತಿನ್ನೋರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯ ರಾಜಧಾನಿ ಬೆಂಗಳೂರು  ನಗರವೊಂದರಲ್ಲೇ ಮೊಟ್ಟೆಯಿಂದ ಕೋಟ್ಯಂತರ ರೂಪಾಯಿ  ವಹಿವಾಟು ಪ್ರತಿನಿತ್ಯ ನಡೆಯುತ್ತದೆ. ಅಂತಹದ್ದರಲ್ಲಿ ಮೊಟ್ಟೆಗೂ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ.
 
 ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ2022 ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ ಒಂದು ಮೊಟ್ಟೆಗೆ ಒಂದರಿಂದ ಎರಡು ರುಪಾಯಿ ಹೆಚ್ಚಿಗೆಯಾಗಿದೆ.
 
ಇನ್ನು ಮೊಟ್ಟೆ ಖಾದ್ಯಗಳ ಬೆಲೆಯೂ ಏರಿಕೆ ಆಗುವ ಸಾದ್ಯತೆಗಳು ಕೂಡ ಹೆಚ್ಚಿವೆ, ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆ ಆದ ಪರಿಣಾಮ ಹಾಗೂ ಶೈಕ್ಷಣಿಕ ವರ್ಷ ಪ್ರಾರಂಭ , ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಇವೆಲ್ಲಾ ಮೊಟ್ಟೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ,  ಮೊಟ್ಟೆಯ ಬೆಲೆ ಏರಿಕೆ ಆಗಿರುವುದರಿಂದ ಅತ್ತ ಮೊಟ್ಟೆಯಿಂದ ಮಾಡುವ ಖಾದ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಕೂಡ ಇದ್ದು, ರೇಟ್ ಏರಿದ ಪರಿಣಾಮ ಗ್ರಾಹಕರಿಗೆ ನೇರವಾಗಿ ಈ ಬಿಸಿ ತಟ್ಟಲಿದೆ. ಸದ್ಯ ವ್ಯಾಪಾರಿಗಳಿಗೆ ಒಂದು ಮೊಟ್ಟೆಗೆ 6.50 ರೂಪಾಯಿಯಂತೆ ಹೋಲ್ ಸೇಲ್ ದರ ನಿಗದಿ ಪಡಿಸಲಾಗಿದ್ದು, ಗ್ರಾಹಕರಿಗೆ 6 ರೂಪಾಯಿಂದ 7 ರೂಪಾಯಿಗೆ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ