ಬೆಳಗಾವಿ : ಕೇಂದ್ರ ಸಚಿವ ಅಮಿತ್ ಶಾ ಸೂಚನೆಯನ್ನೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಧಿಕ್ಕರಿಸಿದ್ದು 19 ವರ್ಷಗಳಿಂದ ಸುಪ್ರೀಂಕೋರ್ಟ್ ನಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥವಾಗುವವರೆಗೆ ಕೆಣಕದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದರು.
ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಇತ್ಯರ್ಥವಾಗುವವರೆಗೆ ಗಡಿವಿವಾದ ಕೆಣಕದಂತೆ ಅಮಿತ್ ಶಾ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ ಪರಸ್ಪರರು ಪ್ರದೇಶಗಳ ಬಗ್ಗೆ ಬೇಡಿಕೆ ಇಡದಂತೆಯೂ ತಿಳಿಸಿದ್ದರು. ನಾಲ್ಕು ತಿಂಗಳ ಹಿಂದೆಯೇ ದೆಹಲಿಯ ತಮ್ಮ ನಿವಾಸದಲ್ಲಿ ಸಭೆ ನಡೆಸಿ ಗಡಿಯಲ್ಲಿ ಶಾಂತತೆ ಕಾಪಾಡುವಂತೆ ಸೂಚನೆ ಬಸವರಾಜ್ ಬೊಮ್ಮಾಯಿ, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆಗೆ ಅಮಿತ್ ಶಾ ಸೂಚಿಸಿದ್ದರು.
ಅಮಿತ್ ಶಾ ಮಾತಿಗೆ ಒಪ್ಪಿ ಕರ್ನಾಟಕ ಸರ್ಕಾರ ಸುಮ್ಮನಿದ್ದರೂ ಮಹಾರಾಷ್ಟ್ರದಿಂದ ಪ್ರಚೋದನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ತನ್ನ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆಗೆ ಮುಂದಾಗಿರುವ ಏಕನಾಥ ಶಿಂಧೆ ಒಕ್ಕೂಟ ವ್ಯವಸ್ಥೆ ಧಿಕ್ಕರಿಸುತ್ತಿರುವ ಶಿಂಧೆಗೆ ಪ್ರತ್ಯುತ್ತರವನ್ನ ಕರ್ನಾಟಕ ಸರ್ಕಾರ ನೀಡಬೇಕಿದೆ.