ಮನೆಯಲ್ಲಿದ್ದರೆ ಬಿಳಿ ಎಕ್ಕ ವಾಸ್ತು ದೋಷವೂ ನಿವಾರಣೆ

ಮಂಗಳವಾರ, 8 ಮಾರ್ಚ್ 2022 (19:47 IST)
ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವೂ ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರತು ಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆಸಾಮಾನ್ಯವಾಗಿ ಬಿಳಿ ಎಕ್ಕ ಗಿಡ ಪ್ರತಿಯೊಬ್ಬರಿಗೂ ಪರಿಚಯವಿರುತ್ತದೆ. ಮನೆಯ ವಾಸ್ತು ದೋಷವನ್ನು (Vastu, ) ನಿವಾರಿಸುವ ಜೊತೆಗೆ ಹಲವು ದೈಹಿಕ, ಆರೋಗ್ಯ ಸಮಸ್ಯೆಗೂ ಪರಿಹಾರವನ್ನು ಒದಗಿಸುತ್ತದೆ ಈ ಬಿಳಿ ಎಕ್ಕ. ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಆರೋಗ್ಯ ಮತ್ತು ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ (Spiritual). ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು. ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಅಂಥವರಿಗೆ ಈ ಬಿಳಿ ಎಕ್ಕದ ಗಿಡ ಅದೃಷ್ಟ ತರಲಿದೆ. ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುತ್ತದೆ. ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಬಿಳಿ ಎಕ್ಕದ ಗಿಡ 5 ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ