2ನೇ ಟೆಸ್ಟ್: ಕುಸಿದ ಭಾರತಕ್ಕೆ ರಹಾನೆ-ಪೂಜಾರ ಆಸರೆ

ಭಾನುವಾರ, 15 ಆಗಸ್ಟ್ 2021 (22:14 IST)

ಆಪದ್ಭಾಂಧವರಾಗಿ ಹೆಸರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ್ ಶತಕದ ಜೊತೆಯಾಟದ ಮೂಲಕ ಎರಡನೇ ಟೆಸ್ಟ್ ಪಂದ್ಯದ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಎರಡನೇ ಇನಿಂಗ್ಸ್ ನಲ್ಲಿ ಭಾರತ ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿದೆ.

ಒಂದು ಹಂತದಲ್ಲಿ ಭಾರತ 55 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಪೂಜಾರ ಮತ್ತು ರಹಾನೆ 4 ವಿಕೆಟ್ ಗೆ 100 ರನ್ ಪೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ ಪೂಜಾರ 206 ಎಸೆತಗಳಲ್ಲಿ 4 ಬೌಂಡರಿ ಸೇರಿದ 45 ರನ್ ಗಳಿಸಿದ್ದಾಗ ವುಡ್ ಎಸೆತದಲ್ಲಿ ಔಟಾಗಿ ಅರ್ಧಶತಕದಿಂದ ವಂಚಿತರಾದರೆ, ರಹಾನೆ 146 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 61 ರನ್ ಬಾರಿಸಿ ಔಟಾದರು.

ಮೊದಲ ಇನಿಂಗ್ಸ್ ನಲ್ಲಿ 27 ರನ್ ಗಳ ಹಿನ್ನಡೆ ಅನುಭವಿಸಿದ್ದ ಭಾರತ ಇದೀಗ 140 ರನ್ ಗಳ ಮುನ್ನಡೆ ಗಳಿಸಿದೆ. ಮಾರ್ಕ್ ವುಡ್ ಇಂಗ್ಲೆಂಡ್ ಪರ 3 ವಿಕೆಟ್ ಪಡೆದು ಮಿಂಚಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ