ಪಕ್ಷಾಂತರ ಕಾಯ್ದೆ ವಿಚಾರ ಎಲ್ಲ ಗೊತ್ತಿದೆ-ಡಿ.ಕೆ.ಶಿವಕುಮಾರ್

ಸೋಮವಾರ, 25 ಸೆಪ್ಟಂಬರ್ 2023 (21:00 IST)
ಡಿಸಿಎಂ ಸ್ಥಾನ ಹೆಚ್ಚಿಸುವ ವಿಚಾರ ಅಂತರಿಕವಾಗಿಯೇ ಬಗೆಹರಿಸಿ ಎಂಬುವ ಕಾಂಗ್ರೆಸ್ ಹೈಕಮಾಂಡ್ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ನಾನು‌ ಮಾತನಾಡಕ್ಕೆ ಹೋಗಲ್ಲ, ಅದು ಬೇರೆ ವಿಚಾರ ಇದೆ. ಬೇರೆ ಪಕ್ಷದ ನಾಯಕರು ನನ್ನ ಜೊತೆ ಅವರ ಅಸಮಾಧಾನ ಬಗ್ಗೆ ಚರ್ಚೆ ಮಾಡಿದ್ದಾರೆ.
 
ಚರ್ಚೆ ಮಾಡಿ ಮಾತನಾಡುತ್ತೇನೆ. ಬಹಳಷ್ಟು ಜನ ಬಿಜೆಪಿ-ಜೆಡಿಎಸ್ ಮೈತ್ರಿ ನಮಗೆ ಇಷ್ಟ ಇಲ್ಲ ಅಂತ ಹೇಳಿದ್ದಾರೆ. ನಾನು‌ ಮೊದಲು‌ ನಮ್ಮಲ್ಲಿ ಮಾತನಾಡುತ್ತೇನೆ. ನಮಗೆ ಪಕ್ಷಾಂತರ ಕಾಯ್ದೆ ವಿಚಾರ ಎಲ್ಲ ಗೊತ್ತಿದೆ.ಎಲ್ಲ ಸಚಿವರಿಗೆ ಎಲ್ಲಾ ಜಿಲ್ಲೆಗಳ ವೀಕ್ಷಕರಾಗಿ ನೇಮಕ ಮಾಡುತ್ತೇವೆ ಎಂದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ