ನೂತನವಾಗಿ ಸರ್ಕಾರ ರಚನೆಯಾಗಿದೆ.ಎಂಟು ಜನ ಸಚಿವರಾಗಿದ್ದಾರೆ.ಸಚಿವರು ಮಾತನಾಡೋದು ನೋಡಿದ್ರೆ.ಇವರು ರಾಜ್ಯದ ಹಿತದೃಷ್ಠಿ ಬಿಟ್ಟು.ದ್ವೇಷದ ರಾಜಕಾರಣ ಮಾಡಲು ಪ್ರಾರಂಭಿಸಿದ್ದಾರೆ.ರಾಜ್ಯದ ಅಭಿವೃದ್ಧಿ ಬದಲು, ದೇಶದ ಪ್ರಾಮುಖ್ಯತೆ ಬಹಳ ಇದೆ ಅನಿಸ್ತಿದೆ.ಅವರು ಏನೇ ಮಾಡಿದ್ರೂ, ತನಿಖೆ ಮಾಡಿದ್ರೂ ಎದುರಿಸಲು ಸಿದ್ದರಿದ್ದೇವೆ.ಹಿಂದೆ ಸರ್ಕಾರವಿದ್ದಾಗಲೂ ಹೀಗೆ ಮಾಡಿದ್ರೂ, ನಾವು ಎದರಿಸಿದ್ವಿ.ಅವರ ವಿಚಾರ ಮತ್ತು ಕಾರ್ಯಾಚರಣೆ ಹಿಮ್ಮೆಟ್ಟುತ್ತೇವೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಕಿಡಿಕರಿದ್ದಾರೆ.
ಚುನಾಯುತ ಸರ್ಕಾರದ ಮುಂದೆ ಜನರ ಸಮಸ್ಯೆ ಇದೆ.ಆ ಸಮಸ್ಯೆ ಬಗೆಹರಿಸಬೇಕು ಅನ್ನೋ, ಆಡಳಿತಕ್ಕೆ ಬೇಕಿರೋ ವಿಚಾರ ಪರಿಪಾಲನೆ ಅನುಷ್ಠಾನ ಕಾಣ್ತಿಲ್ಲ.ಇವತ್ತು ಕರ್ನಾಟಕದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಆಗಿದೆ.ಸಮಸ್ಯೆ ಬಗೆಹರಿಸೋ ಕೆಲಸ ಮಾಡಿಲ್ಲ.ಬೋರ್ ಕೊರೆಸುವ, ವಿದ್ಯುತ್ ಸಂಪರ್ಕ ನೀಡುವ ಅವಶ್ಯಕತೆ ಇದೆ.ಬರೀ ಸೂಚನೆ ಕೊಡೋದ್ರಲ್ಲೆ ಕಾಲ ಕಳೆಯುತ್ತಿದ್ದಾರೆ.ಬರ ಪೀಡಿತ ತಾಲ್ಲೂಕು ಯಾವುದು ಅಂತ ಗುರ್ತಿಸಿ, ಅಲ್ಲಿ ಅಧಿಕಾರ ಟಾಸ್ಕ್ ಫೋರ್ಸ್ ಟೀಮ್ ಮಾಡಿ.ಕೂಡಲೇ ಹಣ ಬಿಡುಗಡೆ ಮಾಡಬೇಕು.ಡಿಸಿ ಅಕೌಂಟ್‌ನಲ್ಲಿ ಹಣ ಇದೆ.ಅದನ್ನ ಬಳಸಿಕೊಳ್ಳಿ ಅಂತ ಹೇಳಲು ಸಿಎಂ ಇಲ್ಲ.ಸಚಿವರಿಗೆ ಕಳಿಸಲು ಖಾತೆ ಹಂಚಿಕೆ ಆಗಿಲ್ಲ.ಕೇವಲ ಅಧಿಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾರಿಹಾಯ್ದಿದ್ದಾರೆ.