ಬೆಂಗಳೂರು: ಡಿಜಿಪಿ ಓಂ ಪ್ರಕಾಶ್ ಬರ್ಬರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ ಪಲ್ಲವಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪತ್ನಿ ಮೇಲೆ ಅನುಮಾನ ಬರಲು ಈ ಮೂರು ವಿಚಾರಗಳೇ ಪ್ರಮುಖ ಕಾರಣವಾಗಿದೆ.
ಆಸ್ತಿ ವಿವಾದ
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಒಂದು ಮನೆಯನ್ನು ತಮ್ಮ ತಂಗಿ ಹೆಸರಿಗೆ ಮಾಡಿದ್ದರು. ಇದಕ್ಕೆ ಪತ್ನಿ ಪಲ್ಲವಿ ಆಕ್ಷೇಪಿಸಿದ್ದರು. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ತನ್ನ ತಂಗಿ ಬಗ್ಗೆ ಮಾತನಾಡದಂತೆ ಓಂ ಪ್ರಕಾಶ್ ತಾಕೀತು ಮಾಡಿದ್ದರಂತೆ. ಹಾಗಿದ್ದರೂ ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಮುಂದುವರಿದೇ ಇತ್ತು.
ಫ್ಯಾಮಿಲಿ ಗ್ರೂಪ್ ನಲ್ಲಿ ಮೆಸೇಜ್
ಐಪಿಎಸ್ ಅಧಿಕಾರಿಗಳ ಫ್ಯಾಮಿಲಿ ವ್ಯಾಟ್ಸಪ್ ಗ್ರೂಪ್ ನಲ್ಲಿ ಕೆಲವು ದಿನಗಳ ಹಿಂದೆ ಪಲ್ಲವಿ ಒಂದು ಮೆಸೇಜ್ ಹಾಕಿದ್ದರಂತೆ. ನನ್ನ ಗಂಡ ಮನೆಯಲ್ಲಿಯೇ ಗನ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಮ್ಮನ್ನೇ ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರ ವಿರುದ್ಧ ಸುಮೊಟೊ ಕೇಸ್ ದಾಖಲಿಸುವಂತೆ ಪಲ್ಲವಿ ಮನವಿ ಮಾಡಿದ್ದರು.
ನಿವೃತ್ತ ಅಧಿಕಾರಿ ಪತ್ನಿಗೆ ಕರೆ
ಓಂ ಪ್ರಕಾಶ್ ಗೆ ಬರ್ಬರವಾಗಿ ಇರಿದ ಪಲ್ಲವಿ ಅವರು ಸಾವನ್ನಪ್ಪುವವರೆಗೂ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ. ಗಂಡ ಸಾವನ್ನಪ್ಪಿದ ಬಳಿಕ ನಿವೃತ್ತ ಡಿಜಿ ಆಂಡ್ ಐಜಿಪಿಯ ಪತ್ನಿಗೆ ಕರೆ ಮಾಡಿ ಐ ಹ್ಯಾವ್ ಫಿನಿಶ್ಡ್ ಮಾನ್ ಸ್ಟರ್ ಎಂದು ಹೇಳಿದ್ದರು ಎನ್ನಲಾಗಿದೆ.
ಈ ಮೂರು ಪ್ರಮುಖ ಕಾರಣಗಳು ಪಲ್ಲವಿಯ ಮೇಲೆ ಪೊಲೀಸರಿಗೆ ಸಂಶಯ ಮೂಡುವಂತೆ ಮಾಡಿದೆ.