ನಿಮ್ಮ ಮನೆ ಆಸ್ತಿ ತೆರಿಗೆಗೆ ರಿಯಾಯಿತಿ- ಪಾವತಿಗೂ ಅವಧಿ ವಿಸ್ತರಣೆ
2020-21ನೇ ಸಾಲಿನ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5 ರಷ್ಟು ರಿಯಾಯಿತಿಯಲ್ಲಿ ಪಾವತಿ ಮಾಡುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಜೂನ್ ನಂತರ ಆಸ್ತಿ ತೆರಿಗೆಯ ಪಾವತಿಯಲ್ಲಿ ಮಾಸಿಕ ಶೇ.2 ರಷ್ಟು ದಂಡದೊಂದಿಗೆ ಆಸ್ತಿ ತೆರಿಗೆ ಪಾವತಿಸಬೇಕಾಗಿರುತ್ತದೆ. ಈ ಸಂಬಂಧ ಆಸ್ತಿ ತೆರಿಗೆಯನ್ನು ಶೇ.5 ರಷ್ಟು ರಿಯಾಯಿತಿಯೊಂದಿಗೆ ಪಾವತಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕಾಗಿ ಅವರು ಕೋರಿದ್ದಾರೆ.