ರೈಲ್ವೆ ನಿಲ್ದಾಣದಲ್ಲಿ ಹುಸಿ ಬಾಂಬ್ ಕರೆ..!!

ಭಾನುವಾರ, 3 ಏಪ್ರಿಲ್ 2022 (16:11 IST)

ರೈಲ್ವೇ ಪೊಲೀಸ್ ಸಹಾಯವಾಣಿಗೆ ಮಾರ್ಚ್ 30 ರಂದು ಆತ ಕರೆ ಮಾಡಿದ್ದು, ಯಲಹಂಕ ರೈಲು ನಿಲ್ದಾಣದಲ್ಲಿ ಬಾಂಬ್ ಇದೆ ಎಂದಿದ್ದಾನೆ. ಇದರಿಂದ ಆತಂಕಗೊಂಡ ಪೊಲೀಸರು ಪ್ರಯಾಣಿಕರನ್ನು ಹೊರಗೆ ಕಳುಹಿಸಿ ಪರಿಶೀಲಿಸಿದ್ದಾರೆ. ಅಲ್ಲದೆ, ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೇ ನಿಲ್ದಾಣಕ್ಕೆ ಸುಮಾರು 90 ನಿಮಿಷ ರೈಲ್ವೇ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು.

ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್), ವಿಧ್ವಂಸಕ ನಿಗ್ರಹ ದಳ ಮತ್ತು ಶ್ವಾನದಳವನ್ನು ಒಳಗೊಂಡ ಎಲ್ಲಾ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಡೀ ನಿಲ್ದಾಣವನ್ನು ಪರಿಶೀಲಿಸಿದ ನಂತರ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ. ಬಳಿಕ ಕರೆ ಬಂದ ಸಂಖ್ಯೆಗೆ ವಾಪಾಸ್ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ