ಬೆಂಗಳೂರಿನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಯುವತಿ ಶೃತಿ ಶೆಟ್ಟಿಗೆ ಪರಪ್ಪನ ಅಗ್ರಹಾರ ಪೋಲೀಸರು ನೋಟಿಸ್ ನೀಡಿದ್ದಾರೆ.. ಶೃತಿ ಶೆಟ್ಟಿ ವಿಚಾರಣೆಗೆ ಬರುವಂತೆ ಪರಪ್ಪನ ಅಗ್ರಹಾರ ಪೋಲೀಸರು ನೋಟೀಸ್ ನೀಡಿದ್ದಾರೆ.
ಶೃತಿ ಶೆಟ್ಟಿ ಬೆಳಗಾವಿ ಮೂಲದ ಯುವತಿಯಾಗಿದ್ದು, ನಿನ್ನೆ ವಿಷಯ ತಿಳಿಯುತ್ತಿದ್ದಂತೆ ಕೂಡಲೆ ಬೆಳಗಾವಿಗೆ ಪರಪ್ಪನ ಅಗ್ರಹಾರ ಪೋಲೀಸರು ಹೋಗಿದ್ರು. ಕೂಡಲೆ ಠಾಣೆಗೆ ಹಾಜರಾಗಿ ನೋಟೀಸ್ಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದ್ದಾರೆ.