ವಿದ್ಯುತ್ ಅವಘಡದಿಂದ ರೈತರು ಸಾವು!

ಮಂಗಳವಾರ, 21 ಫೆಬ್ರವರಿ 2023 (09:58 IST)
ದಾವಣಗೆರೆ : ತೋಟದಲ್ಲಿ ಮೋಟರ್ ಆನ್ ಮಾಡಲು ಹೋಗಿ ಇಬ್ಬರು ರೈತರು ಮೃತಪಟ್ಟ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಾ ಗ್ರಾಮದಲ್ಲಿ ನಡೆದಿದೆ.

ಮೃತ ರೈತರನ್ನು ಮಲ್ಲಪ್ಪ (62), ಮಂಜುನಾಥ್ (32) ಎಂದು ಗುರುತಿಸಲಾಗಿದೆ. ಅಡಿಕೆ ತೋಟಕ್ಕೆ ನೀರು ಬಿಡಲು ಮೋಟಾರ್ ಸ್ವಿಚ್ ಆನ್ ಮಾಡುವ ಸಮಯದಲ್ಲಿ ವಿದ್ಯುತ್ ಶಾಕ್ನಿಂದ ಈ ಅವಘಡ ಸಂಭವಿಸಿದೆ. 

ಮೋಟಾರ್ ಆನ್ ಮಾಡಲು ತೆರಳಿದ್ದ ಮಂಜುನಾಥ್ಗೆ ವಿದ್ಯುತ್ ಪ್ರವಹಿಸಿತ್ತು. ನಂತರ ಆತನ ರಕ್ಷಣೆಗೆ ತೆರಳಿದ್ದ ಮಲ್ಲಪ್ಪನಿಗೂ ಕೂಡ ಪ್ರವಹಿಸಿ ಇಬ್ಬರೂ ಮೃತಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ