ಬಿರು ಬಿಸಿಲನ್ನೂ ಲೆಕ್ಕಿಸದೇ ರೈತರು ಉರುಳು ಸೇವೆ ಮಾಡಿದ್ದೇಕೆ?

ಸೋಮವಾರ, 17 ಡಿಸೆಂಬರ್ 2018 (18:50 IST)
ಬಿರು ಬಿಸಿಲನ್ನೂ ಲೆಕ್ಕಿಸದೇ ಉರುಳು‌ ಸೇವೆ ನಡೆಸಿದ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಬೇಡಿಕೆ ಇಡೇರಿಕೆಗಾಗಿ ಆಗ್ರಹಿಸಿ ರೈತರಿಂದ ಉರುಳು ಸೇವೆ ಮಾಡಲಾಯಿತು. ವಿಜಯಪುರ ನಗರದ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಉರುಳು ಸೇವೆ ನಡೆಯಿತು.

ಭೀಮಾ ಯೋಜನೆಯಲ್ಲಿ ಹಣ ಮಂಜೂರಾದರೂ ಬ್ಯಾಂಕ್ ಸಿಬ್ಬಂದಿ ನೋಟಿಸ್ ನೀಡುತ್ತಿದ್ದಾರೆ. ಬ್ಯಾಂಕಿನ ಸಿಬ್ಬಂದಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡದಂತೆ ತಿಳಿಸಬೇಕು. ರೈತರು ಬೆಳೆದ ಕಡ್ಲೀ, ತೊಗರಿ, ಉಳ್ಳಾಗಡ್ಡಿಗೆ ದರ ನಿಗದಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ವಿವಿಧ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ರೈತರು, ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ