ಕೋಲಾರ ಜಿಲ್ಲಿಯಲ್ಲಿ 3 ನೇ ಅಲೆ ಆತಂಕದ ಭೀತಿ

ಬುಧವಾರ, 11 ಆಗಸ್ಟ್ 2021 (21:05 IST)
ಕೋಲಾರದಲ್ಲಿ ೩ ನೇ ಅಲೆ ಆರಂಭವಾಗಿದ್ಯಾ ಅನ್ನೋ ಆತಂಕ ಜಿಲ್ಲೆಯ ಜನರಲ್ಲಿ ಶುರುವಾಗಿದೆ. ೯ ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ತಾಲ್ಲೂಕಿನ ನಡುಪಳ್ಳಿ ಗ್ರಾಮದ ೯ ವರ್ಷದ ಬಾಲಕಿಗೆ ಜಿಲ್ಲಾಸ್ಪತ್ರೆಯ ವಿಶೇಷ ಮಕ್ಕಳ ಚಿಕಿತ್ಸಾ ಘಟಕದಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ. ಉಸಿರಾಟದ ತೊಂದರೆ, ಜ್ವರ-ಕೆಮ್ಮು ನೆಗಡಿಯ ಲಕ್ಷಣಗಳುಳ್ಳ ಬಾಲಕಿಗೆ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುಲಾಗುತ್ತಿದೆ,  ಇನ್ನೂ ಬಗ್ಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಕಳೆದ ರಾತ್ರಿ ಜಿಲ್ಲಾಸ್ಪತ್ರೆಗೆ ದಾಖಲಾದ ಮಗು ಆರೋಗ್ಯವಾಗಿದೆ, ಕಳೆದ ೧೦ ದಿನಗಳಲ್ಲಿ ಜಿಲ್ಲೆಯಾದ್ಯಂತ ೪೪೯೮ ಮಕ್ಕಳ ಪರೀಕ್ಷೆ ಮಾಡಲಾಗಿದ್ದು ೪೭ ಮಕ್ಕಳಿಗೆ ಮಾತ್ರ ಸೋಂಕು ಇರುವುದು ದೃಢಪಟ್ಟಿದೆ. ೪೭ ರಲ್ಲಿ ನಿನ್ನೆ ದಾಖಲಾದ ೯ ವರ್ಷದ ಮಗು ಒಬ್ಬರೆ ಆಸ್ಪತ್ರೆಗೆ ದಾಖಲಾಗಿರುವುದು, ಉಳಿದಂತೆ ಎಲ್ಲಾ ಮಕ್ಕಳು ಅರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದ್ರು. ಇನ್ನೂ ೧೮ ವರ್ಷ ಒಳಗಿನವರಲ್ಲಿ ಕೊರೊನಾ ಪಾಸಿಟಿವಿಟಿ ಶೇ.೧.೦೪ ರಷ್ಟಿದೆ ಎಂದು ಅವರು ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ