150 ಕೊರೊನಾ ಕೇಸ್ ಉಡುಪಿಯಲ್ಲಿ ಒಂದೇ ದಿನ ಪತ್ತೆ
ರಾಜ್ಯದ ಈ ಜಿಲ್ಲೆಯಲ್ಲಿ ಇದೀಗ ಕೊರೊನಾ ಪ್ರಕರಣ ಅತೀ ವೇಗದಲ್ಲಿ ಏರುತ್ತಿದೆ. ಒಂದೇ ದಿನ ಬರೋಬ್ಬರಿ 150 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ 260 ಕೊರೊನಾ ಪ್ರಕರಣಗಳು ದೃಢವಾಗಿದ್ದವು. ಹೊಸ 150 ಪ್ರಕರಣಗಳ ಕಾರಣದಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 410 ಕ್ಕೆ ಏರಿಕೆ ಕಂಡಿದೆ.
ಹತ್ತು ವರ್ಷದ ಒಳಗಿನ 9 ಮಕ್ಕಳು ಸೇರಿದಂತೆ 120 ಮಂದಿ ಪುರುಷರಲ್ಲಿ ಹಾಗೂ 30 ಮಂದಿ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಒಟ್ಟು ಸೋಂಕಿತ ಪ್ರಕರಣಗಳಲ್ಲಿ ಈ ವರೆಗೆ 63 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ ಆಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಇದೀಗ 346 ರಷ್ಟು ಸಕ್ರೀಯ ಪ್ರಕರಣಗಳಿವೆ.