ಚೀಲದಲ್ಲಿ ನವಜಾತ ಶಿಶು ಪತ್ತೆ!
ಖಾನಾಪುರದ ತಹಶೀಲ್ದಾರ್ ಕಚೇರಿ ಮುಂಭಾಗದ ಮಾವಿನ ಮರದ ಕೆಳಗೆ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಸ್ಥಳೀಯರು ಶಿಶುವನ್ನು ನೋಡಿ ಗಮನಿಸಿ ಸ್ಥಳದಲ್ಲಿ ಯಾರು ಪತ್ತೆಯಾಗದೇ ಇದ್ದಾಗ ಖಾನಾಪೂರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಮತ್ತು ದಾದಿಯರು ಮಗುವನ್ನು ಪರೀಕ್ಷಿಸಿ ಶಿಶು ಕಲ್ಯಾಣಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಆ ಬಳಿಕ ಮಗುವನ್ನು ಬೆಳಗಾವಿಗೆ ಕಳುಹಿಸಲಾಗಿದೆ.