ಅಕ್ರಮ ಸಂಬಂಧದಲ್ಲಿದ್ದ ಯುವಕನ ಕಥೆ ಫಿನಿಷ್

ಶುಕ್ರವಾರ, 3 ಏಪ್ರಿಲ್ 2020 (14:12 IST)
ತನ್ನ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ಯುವಕನನ್ನು ಹುಡುಗಿಯ ತಂದೆಯೊಬ್ಬ ಭೀಕರವಾಗಿ ಕೊಲೆ ಮಾಡಿದ್ದಾನೆ.

ತನ್ನ ಮಗಳ ಜೊತೆ ಅಕ್ರಮ ಸಂಬಂಧವನ್ನು ಬೀರಪ್ಪ ಕಮತಿ (26) ಹೊಂದಿರೋದ್ರಿಂದ ರೊಚ್ಚಿಗೆದ್ದ ಹುಡುಗಿಯ ತಂದೆ ಬೀರಪ್ಪ ಬಡಾಯಿ ಹಾಗೂ ಸತ್ತೆಪ್ಪ ಬಡಾಯಿ ಸೇರಿಕೊಂಡು ಯುವಕ ಬೀರಪ್ಪ ಕಮತಿಯನ್ನು ಕೊಲೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿಯ ನರಸಿಂಗಪುರ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ