ರಸ್ತೆ ಮದ್ಯೆ ಹುಚ್ಚಾಟ ಮೆರೆದಿದ್ದವರ ವಿರುದ್ದ ಎಫ್ ಐಆರ್..!

ಶನಿವಾರ, 16 ಡಿಸೆಂಬರ್ 2023 (15:00 IST)
ರಸ್ತೆ ಮದ್ಯೆ  ಹುಚ್ಚಾಟ ಮೆರೆದಿದ್ದವರ ವಿರುದ್ದ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಏರ್ಪೋರ್ಟ್ ರಸ್ತೆಯಲ್ಲಿ ಕಾರ್ ರೂಫ್ ಮೇಲೆ ಹತ್ತಿ ಯುವಕರ ತಂಡ ಡ್ಯಾನ್ಸ್ ಮಾಡಿದ್ದರು.ಚಲಿಸುತ್ತಿರುವ ಕಾರಿನ ಮೇಲೆ ಬಟ್ಟೆ ಕಳಚಿ ಡ್ಯಾನ್ಸ್  ಮಾಡಿದ್ದು,ನಾಲ್ವರು ಯುವಕರಿಂದ ನಡು ರಸ್ತೆಯಲ್ಲಿ ಪುಂಡಾಟ ಮೆರೆಯಲಾಗಿದೆ.
 
DL 3cba9775  ನಂಬರಿನ ಕಾರಿನಲ್ಲಿ ಪುಂಡಾಟ ನಡೆದಿದ್ದು,ಕುಡಿದ ಅಮಲಿನಲ್ಲಿ ಕಾರಿನ ರೂಫ್ ಹತ್ತಿ ಪುಂಡಾಟ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಎನ್ ಹೆಚ್ 7  ಏರ್ ಪೋರ್ಟ್ ರಸ್ತೆಯಲ್ಲಿ ಘಟನೆ ನಡೆದಿದೆ.ಇದನ್ನ ಪೊಲೀಸರಿಗೆ ಟ್ಯಾಗ್ ಮಾಡಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಈ ಬಗ್ಗೆ  ಚಿಕ್ಕಜಾಲ ಸಂಚಾರಿ ಪೊಲೀಸರು ಇಂಡಿಯನ್ ಮೊಟಾರ್ ಸೈಕಲ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ