ಬೆಂಗಳೂರಿನ ಟಿಂಬರ್ ಲೇಔಟ್ನಲ್ಲಿ ಅಗ್ನಿ ಅವಘಡ

ಭಾನುವಾರ, 15 ಜನವರಿ 2023 (14:10 IST)
ಬೆಂಗಳೂರಿನ ಪ್ಲೇವುಡ್ ಗೋಡೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಸ್ಥಳಕ್ಕೆ 10 ಅಗ್ನಿಶಾಮಕ ವಾಹನ ದೌಡಯಿಸಿದ್ದು,ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.ಸಂಪೂರ್ಣ ಗೋಡೋನ್ ಗೆ ಬೆಂಕಿ ಆವರಿಸಿದ್ದು ಬೆಂಕಿ ನಂದಿಸಲು ಅಗ್ನಿಶಾಮಕದಳದವರು ಹರಸಾಹಸ ಪಟ್ಟಿದ್ದಾರೆ.
 
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು,ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ  ಪ್ಲೇ ವುಡ್ ಬೆಂಕಿಗೆ ಆಹುತಿಯಾಗಿದೆ.7 ವರ್ಷದಿಂದ ಗೋಡನ್ ನಡೆಸುತ್ತಿದ್ದ  ನವೀನ್ ಗುಪ್ತ.ಸಂಜೆ ಎಂದಿನಂತೆ ಗೋಡನ್ ಗೆ ಬೀಗಾ ಹಾಕಿ‌ ಮಾಲೀಕರು ಹೋಗಿದ್ದರು.ಗೋಡನ್ ನಲ್ಲಿ ಯಾರು ಇಲ್ಲದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿಯ ಕೆನ್ನಾಲಿಗೆ ಕ್ಷಣದಿಂದ‌‌ ಕ್ಷಣಕ್ಕೆ ಹೆಚ್ಚಾಗ್ತಿದ್ದು ಬೆಂಕಿ‌ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ರು.
 
ಪ್ಲೇವುಡ್ ಗೋಡೋನ್ ಪಕ್ಕದಲ್ಲೇ ಹೆಚ್ ಪಿ ಗ್ಯಾಸ್ ಗೋಡೋನ್ ಇತ್ತು.ಗೋಡೋನ್ ನಲ್ಲಿ 580 ಲೋಡೆಡ್ ಸಿಲಿಂಡರ್ ಗಳಿದ್ದವು.ಒಂದು ವೇಳೆ ಗ್ಯಾಸ್ ಗೋಡೋನ್ ಗೆ ಬೆಂಕಿ ತಗುಲಿದ್ರೆ ದೊಡ್ಡ ಅನಾಹುಯವೇ ನಡೆದು ಹೋಗ್ತಿತ್ತು. ಸದ್ಯ ಅದೃಷ್ಟವಶಾತ್ ಆ ರೀತಿ ಆಗಿಲ್ಲ.ಕೂಡಲೇ ಎಚ್ಚೆತ್ತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಅಷ್ಟೂ ಸಿಲಿಂಡರ್ ಗಳನ್ನ ಕೂಡಲೇ ಶಿಫ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ