ಚಾಮುಂಡಿ ಬೆಟ್ಟದಲ್ಲಿ ವಿದೇಶಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ

ಮಂಗಳವಾರ, 21 ಫೆಬ್ರವರಿ 2017 (06:51 IST)
ಚಾಮುಂಡಿ ಬೆಟ್ಟದಲ್ಲಿ ಸೋಮವಾರ ರಾತ್ರಿ ವಿದೇಶಿ ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯವನ್ನೆಸಗಲಾಗಿದೆ.
ನಿನ್ನೆ ಸಂಜೆ 7.30ರ ಸುಮಾರಿಗೆ ನಂದಿ ವಿಗ್ರಹದ ಬಳಿಯಿಂದ ಮೆಟ್ಟಿಲುಗಳನ್ನು ಇಳಿಯುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ದುಷ್ಕರ್ಮಿ, ಅವರ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆದರೆ ಆಕೆ ಪ್ರತಿರೋಧ ಒಡ್ಡಿದಾಗ 
 
ಆಕೆಯನ್ನು ಎಳೆದಾಡಿ ಚುಂಬಿಸಿ, ಬಳಿಕ 2,000ರೂಪಾಯಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
 
ಘಟನೆಯಿಂದ ಆಘಾತಗೊಂಡಿದ್ದ ಮಹಿಳೆ  ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
 
ಹಲ್ಲೆಯಿಂದ ಗಾಯಗೊಳಗಾಗಿದ್ದ ಪೀಡಿತೆಗೆ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ