ಮಹಾಕ್ಯಾತೆಗೆ BJP ಕುಮ್ಮಕ್ಕು ಇದ್ಯಾ-ಮಾಜಿ ಸಿಎಂ H.D ಕುಮಾರಸ್ವಾಮಿ

ಶನಿವಾರ, 26 ನವೆಂಬರ್ 2022 (16:17 IST)
ಬೆಳಗಾವಿಯಲ್ಲಿ ಮಹಾರಾಷ್ಟ್ರದ ಪುಂಡರು ಮತ್ತೆ ಕ್ಯಾತೆ ತೆಗೆದಿದ್ದು, ಈ ಕುರಿತು ಮಾಜಿ ಸಿಎಂ H.D ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಸೇನೆ ಒಡೆದು BJP ಜೊತೆ ಸೇರಿದ ಗುಂಪು ಗಡಿ ತಗಾದೆ ತೆಗೆದಿದೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಆಂಧ್ರ ಪ್ರವಾಸಿಗರು ಬರ್ತಾರೆ. ಆನೇಕಲ್ ಭಾಗದಲ್ಲಿ ತಮಿಳುನಾಡು, ಮಂಗಳೂರು ಭಾಗದಲ್ಲಿ ಕೇರಳ ಗಡಿ ಇದೆ. ಆದರೆ ಅಲ್ಲಿ ಯಾವುದೇ ಗಡಿ ವಿವಾದವಿಲ್ಲ. ಬೆಳಗಾವಿಯ ಮೇಲೆ ಮಹಾರಾಷ್ಟ್ರಕ್ಕೆ ಯಾಕೆ ಕಣ್ಣು ಎಂದು ಪ್ರಶ್ನಿಸಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಕುರಿತು ಮಾತನಾಡಿದ್ರು. ಬೆಳಗಾವಿಗೆ ಹೆಚ್ಚು ಸಕ್ಕರೆ ಕಾರ್ಖಾನೆಗಳು, ಸುವರ್ಣಸೌಧ, ನೀರಾವರಿ ಸೌಲಭ್ಯವನ್ನು ಕೊಟ್ಟಿದ್ದೇವೆ. ಮಹಾರಾಷ್ಟ್ರದ ಧ್ವನಿಗೆ ಕರ್ನಾಟಕ ಬಿಜೆಪಿಯವರ ಕುಮ್ಮಕ್ಕು ಇದ್ಯಾ ಎಂಬ ಅನುಮಾನ ನನ್ನನ್ನು ಕಾಡ್ತಿದೆ ಎಂದು ಗುಡುಗಿದ್ರು. ಕಾಂಗ್ರೆಸ್​​​ನ ರಾಜ್ಯ ಸಭಾ ಸದಸ್ಯ ಶರತ್ ಪವಾರ, ಬೆಳಗಾವಿ ಪಡೆದು ಬೇರೆ ಜಾಗ ಬಿಟ್ಟುಕೊಡ್ತೀವಿ ಅನ್ನುತ್ತಿದ್ದಾರೆ. ಪದೇ ಪದೇ ಯಾಕೆ ಕನ್ನಡಗಿರನ್ನು ಕೆದಕುತ್ತಿದ್ದೀರಿ ಎಂದು ಹರಿಹಾಯ್ದರು. BJP ಸರ್ಕಾರ ಬಂದ ವೇಳೆಯೇ ಗಡಿ ವಿವಾದ ಬರುತ್ತೆ. ಸಿಎಂ ಬಸವರಾಜ್​​​ ಬೊಮ್ಮಾಯಿ, ಕನ್ನಡಿಗರಿಗೆ ಮುಂದೆ ಹೇಳೋದೇ ಬೇರೆ ನಡೆದುಕೊಳ್ಳೋದೇ ಬೇರೆ.  ಅವರು ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ ಎಂದು ವ್ಯಂಗ್ಯವಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ