ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ ಮಾಜಿ ಸಿಎಂ ಸಿದ್ದರಾಮಯ್ಯ

ಗುರುವಾರ, 8 ಸೆಪ್ಟಂಬರ್ 2022 (20:52 IST)
ತಗ್ಗು ಪ್ರಶೇಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದು, ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದಾರೆ.ಸೋಮವಾರ ಮತ್ತು ಮಂಗಳವಾರ ಬೆಂಗಳೂರಲ್ಲಿ ಮಳೆ ಜೋರಾಗಿತ್ತು.ಯಾವತ್ತೂ ಬೀಳದೇ ಇರೋ ಮಳೆ ಬಂದಿದೆ.ಹೀಗಾಗಿ ಅನೇಕ ಮನೆಗಳಿಗೆ ನೀರು ತುಂಬಿ ಬೋಟ್ ನಲ್ಲಿ ಓಡಾಡೋ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 
ಈಗ ನಾಲ್ಕೈದು ಅಡಿ ನೀರು ಇತ್ತಂತೆ.ಮನೆಯಲ್ಲ ಖಾಲಿ ಮಾಡಿದ್ದಾರೆ.ನಮ್ಮ ಕಾಲದಲ್ಲಿ ರಾಜುಕಾಲುವೆ ಒತ್ತುವರಿ ತೆರವು ಮಾಡುವ ಕ್ರಮ ವಹಿಸಿದ್ವಿ.1953 ಒತ್ತುವರಿಗಳನ್ನು ಗುರುತು ಮಾಡಿದ್ದೆವೆ.ಅದರಲ್ಲಿ 1300 ಒತ್ತಯವರಿ ತೆರವುಗೊಳಿಸಿದ್ವಿ.600 ಒತ್ತುವರಿಗೆ ಹಾಗೆ ಇತ್ತು ಅದನ್ನು ತೆರವು ಮಾಡಿದ್ದರೆ ಹೀಗೆ ಆಗ್ತಾ ಇರಲಿಲ್ಲ.ಅಕ್ರಮವಾಗಿ ಮನೆ ಕಟ್ಟಿರುವವರ ವಿರುದ್ಧ ಕ್ರಮ ಆಗಿದ್ದರೆ ಹೀಗೆ ಆಗ್ತಾ ಇರಲಿಲ್ಲ.ಸಿಎಂ ಹೇಳ್ತಾರೆ ಹಿಂದಿನ ಸರ್ಕಾರ ಇದಕ್ಕೆ ಕಾರಣ ಅಂತ.ಅವರೇನು ಮಾಡಿದ್ದಾರೆ ಅಂತ ಹೇಳಬೇಕಲ್ವಾ?ಅದನ್ನು ಹೇಳೊಲ್ಲ ಅವರು ಹಿಂದಿನ ಸರ್ಕಾರ ಕಾರಣ ಅಂತ ಹೇಳ್ತಾರೆ.ಬಹಳ ಸುಲಭ ಜವಬ್ದಾರಿಯಿಂದ ನುಣುಚಿಕೊಳ್ಳೋದು ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಇನ್ನು ಬಿಜೆಪಿ ಸರ್ಕಾರ ನಾವೇನು ಮಾಡಿದ್ದೇವೆ ಅಂತ ಜನರಿಗೆ ಹೇಳಬೇಕಲ್ವಾ?ಬೆಂಗಳೂರನ್ನ ಅನಗತ್ಯವಾಗಿ 800 ಚದರ ಕಿಲೋ ಮೀಟರ್ ಹೆಚ್ಚು ಮಾಡಿದ್ರು.ಇದು ಕೂಡ ಒಂದು ಸಮಸ್ಯೆಯಾಗಿದೆ.ಇದಕ್ಕೆ ಒಬ್ಬ ಕಮಿಷನರ್ ಮಾತ್ರ ಇರೋದು.ಒತ್ತುವರಿ ತೆರವಿಗೂ ಕೂಡ ವಿರೋಧ ಮಾಡಿದ್ದರು ಇವರು.ನಿಮ್ಮ ಕೆಲಸ ಮಾಡದೇ ನಿಮ್ಮ ವೈಪಲ್ಯ ಮುಚ್ಚಿಕೊಳ್ಳಲು ನಮ್ಮ ಸರ್ಕಾರದ ಮೇಲೆ ಹೇಳೋದು ಸರಿ ಅಲ್ಲ.ಇಲ್ಲಿನ ಎಮ್ ಎಲ್ ಎ ಎಷ್ಟು ವರ್ಷದಿಂದ ಇದಾರೆ.ಅವರು ಏನು ಮಾಡ್ತಾ ಇದ್ದಾರೆ ಅವರು.ಇದಕ್ಕೆ ಜವಬ್ದಾರಿ ಬಿಜೆಪಿ ಅಲ್ವಾ? ಅವರು ಮೂರು ವರ್ಷದಿಂದ ಏನೂ ಮಾಡಿಲ್ಲ.ಅದಕ್ಕೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ.ನಾನು ಅಧಿವೇಶನದಲ್ಲಿ ಇದನ್ನು ಪ್ರಸ್ತಾಪ ಮಾಡ್ತೀನಿ.ಯಾರ ಕಾಲದಲ್ಲಿ ಏನು ಆಗಿತ್ತು ಅಂತ ಹೇಳ್ತೀನಿ.ಇದರಿಂದ ಬ್ರಾಂಡ್ ಬೆಂಗಳೂರಿಗೆ ಇದು ಎಫೆಕ್ಟ್ ಆಗಿದೆ.ಇದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು.ಐಟಿ ಬಿಟಿ ಸಿಟಿ ಅಂತ ಹೇಳ್ತೀವಿ.ಇದೇ ತರ ಮುಂದುವರೆದರೆ ನಾವು ಬಿಡ್ತೀವಿ ಅಂತ ಹೇಳಿದ್ದಾರೆ ಐಟಿ ಬಿಟಿಯವರು ನಷ್ಟ ಮಾಡಿಕೊಂಡು ಅವರು ಯಾಕೆ ಇರ್ತಾರೆ.ನಾನು ಸರ್ಕಾರಕ್ಕೆ ಹೇಳ್ತೀನಿ ಒತ್ತುವರಿ ತೆರವು ಮಾಡೋದಿಕ್ಕೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ವಹಿಸೋದಿಕ್ಕೆ ಎಂದು ಸಿದ್ದರಾಮಯ್ಯ ಅಸಾಮಾಧಾನ ಹೊರಹಾಕಿದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ