ಮೋಸ ಮಾಡಿದ ಹುಡುಗಿ ಬೇರೆಯವನ ತೆಕ್ಕೆಯಲ್ಲಿ ನೋಡಿದ ಮಾಜಿ ಲವರ್ ಹೀಗೆ ಮಾಡೋದಾ

ಮಂಗಳವಾರ, 26 ನವೆಂಬರ್ 2019 (19:52 IST)
ತಾನು ಲವ್ ಮಾಡಿದ ಹುಡುಗಿ ಬೇರೆಯವನ ತೆಕ್ಕೆಯಲ್ಲಿರೋದನ್ನ ಕಂಡು ಮಾಜಿ ಲವರ್ ಮಾಡಬಾರದ ಕೆಲಸ ಮಾಡಿದ್ದಾನೆ.

ಮಹ್ಮದ್ ರಫಿ ಎಂಬಾತ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದನು. ಇವರ ಪ್ರೀತಿ ಕೆಲವು ದಿನಗಳ ಹಿಂದೆ ಬ್ರೇಕ್ ಅಪ್ ಆಗಿತ್ತು.

ಆ ಬಳಿಕ ಆ ಹುಡುಗಿ ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ನಯಾಜ್ ಪಾಷಾ ಜೊತೆಗೆ ಕ್ಲೋಸ್ ಆಗಿದ್ದಾಳೆ.

ಇದನ್ನು ನೋಡಿದ ಮಾಜಿ ಲವರ್ ಮಹ್ಮದ್ ರಫಿ, ತನ್ನ ಹಳೆ ಲವರ್ ನ ಹೊಸ ಬಾಯ್ ಫ್ರೆಂಡ್ ಆಗಿರೋ ನಯಾಜ್ ಪಾಷಾ ಮೇಲೆ ಚಾಕುವಿನಿಂದ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ.

ಮೈಸೂರಿನ ನೆಹರು ಸರ್ಕಲ್ ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ