ಸಿದ್ದರಾಮಯ್ಯ ವಿರುದ್ಧ ಕೆ.ಸಿ. ವೇಣುಗೋಪಾಲ್`ಗೆ ಎಚ್. ವಿಶ್ವನಾಥ್ ಪತ್ರ

ಮಂಗಳವಾರ, 9 ಮೇ 2017 (08:38 IST)
ಬಿಜೆಪಿ ಬಳಿಕ ರಾಜ್ಯ ಕಾಂಗ್ರೆಸ್`ನಲ್ಲಿ ಭಿನ್ನಮತದ ಬೇಗುದಿ ಸ್ಫೋಟವಾಗುತ್ತಿದೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲೇ ಉಸ್ತುವಾರಿ ಕೆ.ಸಿ. ವೇಣುಗೋಪಾಲ್`ಗೆ ಕಾರ್ಯಕರ್ತರು ದೂರಿತ್ತಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ, ಸಂಸದ ಎಚ್. ವಿಶ್ವನಾಥ್, ಕೆ.ಸಿ. ವೇಣುಗೋಪಾಲ್`ಗೆ ಪತ್ರ ಬರೆದು ಸಿಎಂ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

 ನನ್ನನ್ನ ಪಕ್ಷದಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನನಗೆ ಸಿಎಂ ಸಿದ್ದರಾಮಯ್ಯ ಘನ ಘೋರ ಅಪಮಾನ ಮಾಡಿದ್ದಾರೆ. ನಾನು ಪಕ್ಷ ಬಿಡುವ ಪರಿಸ್ಥಿತಿ ಬಂದಿದೆ. ನನ್ನ ರೀತಿಯೇ ಹಲವರು ಪಕ್ಷ ಬಿಡುವ ಚಿಂತನೆಯಲ್ಲಿದ್ದಾರೆ. ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಪತ್ರದಲ್ಲಿ ವಿಶ್ವನಾಥ್ ಆರೋಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದೇವೇಳೆ, ಉಪಚುನಾವಣೆಯಲ್ಲಿ ಸರ್ಕಾರದ ಸಾಧನೆಯಿಂದ ಗೆಲುವು ಸಾಧಿಸಿಲ್ಲ, ವಿಪಕ್ಷಗಳ ದೌರ್ಬಲ್ಯದಿಂದ ಗೆಲುವು ದಕ್ಕಿದೆ. 4 ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವ ನನ್ನನ್ನ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ವಿಶ್ವನಾಥ್ ತಮ್ಮ ಸಮಾಧಾನ ತೋರ್ಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ