ಸಿಎಂ ಮನೆಮುಂದೆ ಧರಣಿ ನಡೆಸುವ ಎಚ್ಚರಿಕೆ ನೀಡಿದ ದೇವೇಗೌಡರು

ಶನಿವಾರ, 25 ಫೆಬ್ರವರಿ 2017 (13:47 IST)
ಕೆಆರ್ಎಸ್`ಗೆ ಹೇಮಾವತಿ ಡ್ಯಾಂ ನೀರು ಬಿಡುಗಡೆ ವಿರೋಧಿಸಿ ಹಾಸನ ಬಂದ್`ಗೆ ಜೆಡಿಎಸ್ ಸೇರಿ ವಿವಿಧ ಸಂಘಟನೆಗಳು ಬಂದ್`ಗೆ ಕರೆ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು,  ಡಿಸಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಭಾಗವಹಿಸಿದ್ದಾರೆ.


ನಮ್ಮಲ್ಲೇ ನೀರಿನ ಕೊರತೆ ಇದೆ ಅಂತಹುದರಲ್ಲಿ ನಮ್ಮ  ಭಾವನೆಗಳಿಗೆ ಬೆಲೆ ಕೊಡದೇ ಕೆಆರ್ಎಸ್`ಗೆ ನೀರು ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ ಎಂಬುದು ಜನರ ಆಕ್ರೋಶವಾಗಿದೆ.

ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡರು, ನಾನು ತಾಳ್ಮೆ ಕಳೆದುಕೊಂಡಿದ್ದೇನೆ. ಕೂಡಲೇ ಹೇಮಾವತಿಯಿಂದ ಕೆಆರ್`ಎಸ್`ಗೆ ನೀರು ಬಿಡುಗಡೆ ನಿಲ್ಲಿಸಬೇಕು. ಇಲ್ಲವಾದರೆ ಸಿಎಂ ಮನೆಮುಂದೆ ಪ್ರತಿಭಟನೆ ನಡೆಸುವುದಾಗಿ ದೇವೇಗೌಡರು ಎಚ್ಚರಿಕೆ ನೀಡಿದರು. ಯಗಚಿ ಡ್ಯಾಂನಿಂದ ಹಾಸನಕಕೆ ನೀರು ಕೊಡದಿರುವ ಬಗ್ಗೆ ಸಿಎಂ ಅವರನ್ನ ತರಾಟೆಗೆ ತೆಗೆದುಕೊಂಡ ದೇವೇಗೌಡರು, ಸಿಎಂ ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು, ಕುಡಿಯುವ ನೀರಿಗೂ ಭಿಕ್ಷೆ ಬೇಡಬೇಕಾ? ಎಂದು ವಾಗ್ದಾಳಿ ನಡೆಸಿದರು.

 

ನಮ್ಮಲ್ಲೇ ನೀರಿನ ಕೊರತೆ ಇದ್ದು ಸ್

ವೆಬ್ದುನಿಯಾವನ್ನು ಓದಿ