ಗ್ರಾಮಸ್ಥರ ಮೇಲೆ ನರಿಗಳ ದಾಳಿ
ಗ್ರಾಮಸ್ಥರ ಮೇಲೆ ನರಿ ದಾಳಿ ಮಾಡಿದ್ದು, ಹಲವರಿಗೆ ಗಂಭೀರ ಗಾಯವಾಗಿರೋ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕದ್ದರಗಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡ್ತಿರೋವಾಗ ನರಿ ಏಕಾಏಕಿ ದಾಳಿ ಮಾಡಿದ್ದು, ಕದ್ದರಗಿ ಗ್ರಾಮದ ನಾಲ್ಕೈದು ಜನರ ಕೈಕಾಲಿಗೆ ಕಚ್ಚಿದೆ. ಕಳೆದ ಹಲವು ದಿನಗಳಿಂದ ಜನರು ಹಾಗೂ ಜಾನುವಾರುಗಳಿಗೆ ತೊಂದರೆ ಕೊಡ್ತಿದೆ. ಗ್ರಾಮಸ್ಥರ ಮೇಲೆ ದಾಳಿ ಮಾಡಿದ ನರಿಯನ್ನ ಊರಿನ ಶ್ವಾನಗಳು ಅಟ್ಟಾಡಿಸಿಕೊಂಡು ಹೋಗಿ ಕೊಂದಿವೆ. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂಬಂತೆ, ಜನರ ಮೇಲೆ ದಾಳಿ ಮಾಡಿದ್ದ ಕಾರಣ ಶ್ವಾನಗಳು ಸೇಡು ತೀರಿಸಿಕೊಂಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.