ಅಪ್ಪುಅಭಿಮಾನಿಗಳಿಂದ ಮಕ್ಕಳಿಗೆ ಉಚಿತ ಚಿತ್ರ ಪ್ರದರ್ಶನ

ಭಾನುವಾರ, 6 ನವೆಂಬರ್ 2022 (15:50 IST)
ನಟ ಪುನೀತ್​ ರಾಜ್​​ಕುಮಾರ್​​ ನಮ್ಮನ್ನಗಲಿ ವರ್ಷಗಳೇ ಆದರೂ ಸಹ ಅಪ್ಪು ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆ ಆಗಿಲ್ಲ. ಪುನೀತ್​​​ ಕೊನೆದಾಗಿ ಕಾಣಿಸಿಕೊಂಡ ಸಾಕ್ಷ್ಯಾ ಚಿತ್ರ ಗಂಧದಗುಡಿ ರಿಲೀಸ್​ ಆಗಿ ಜನರ ಮನಸ್ಸನ್ನು ಗೆದ್ದಿದೆ. ಪುನೀತ್​ ಅಭಿಮಾನಿಗಳು ಶಾಲಾ ಮಕ್ಕಳಿಗೆ ಉಚಿತ ಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ಚಿತ್ರ ಪ್ರದರ್ಶನ ನೀಡಲಾಗಿದೆ. ಚಿತ್ರಮಂದಿರಗಳಿಗೆ ತಾವೇ ಟಿಕೆಟ್​​​ ಹಣ ತುಂಬಿ ಮಕ್ಕಳಿಗಾಗಿ ಉಚಿತ ಪ್ರದರ್ಶನವನ್ನು ನೀಡಿದ್ದಾರೆ. ಪುಣ್ಯಕೋಟಿ ಗ್ರೂಪ್​​ನ ಅಧ್ಯಕ್ಷ ಮಂಜುನಾಥ್​​​​, ಲಿಂಗಯ್ಯಸ್ವಾಮಿ ಎನ್ನುವವರಿಂದ ಚಲನಚಿತ್ರ ಪ್ರದರ್ಶನದ ಉಚಿತ ಸೇವೆ ನೀಡಲಾಗಿದೆ. ಶಾಲಾ ಮಕ್ಕಳು ಅಪ್ಪುವನ್ನು ಕಣ್ತುಂಬಿಕೊಂಡ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ