ಕಾಂಗ್ರೆಸ್ಗೆ ಪೂರ್ಣ ಬಹುಮತ : ಎಬಿಪಿ ಸಿ- ವೋಟರ್ ಸಮೀಕ್ಷೆ

ಗುರುವಾರ, 30 ಮಾರ್ಚ್ 2023 (08:49 IST)
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಈಗಾಗಲೇ ಪ್ರಕಟವಾಗಿದ್ದು, ವಿಧಾನಸಭೆ ಗದ್ದುಗೆ ಏರಲು ಮೂರೂ ಪಕ್ಷಗಳು ನಾನಾ ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಬೆನ್ನಲ್ಲೇ ಎಬಿಪಿ ಸಿ- ವೋಟರ್ ಸಮೀಕ್ಷೆ ಪಟ್ಟಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ.
 
ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ 115-127 ಸೀಟ್ ಬರುವ ನಿರೀಕ್ಷೆಯಿದೆ. ಅದೇ ರೀತಿ ಬಿಜೆಪಿಗೆ 68-80, ಜೆಡಿಎಸ್ಗೆ 23-35 ಹಾಗೂ ಇತರೆ 0-02 ಸೀಟ್ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ರಾಜ್ಯದಲ್ಲಿ ಯಾರಿಗೂ ಬಹುಮತವಿಲ್ಲ ಎಂದು ತಿಳಿಸಿದೆ. ಝೀ ನ್ಯೂಸ್ನ ಸಮೀಕ್ಷೆ ಈ ರೀತಿಯಿದೆ. ಬಿಜೆಪಿ 96 -106 ಸೀಟ್ ಪಡೆದರೆ, ಕಾಂಗ್ರೆಸ್ 88-98 ಸೀಟ್, ಜೆಡಿಎಸ್ – 23-33 ಹಾಗೂ ಇತರೆ 02-07 ಸೀಟ್ ಪಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ