ಫೈನ್ ಡಿಸ್ಕೌಂಟ್ಗೆ ಫುಲ್ ರೆಸ್ಪಾನ್ಸ್

ಮಂಗಳವಾರ, 7 ಫೆಬ್ರವರಿ 2023 (08:14 IST)
ಬೆಂಗಳೂರು : ಸಾರಿಗೆ ನಿಯಮ ಉಲ್ಲಂಘನೆ ದಂಡ ಪಾವತಿಸಲು ನೀಡಿದ್ದ ಶೇ.50ರಷ್ಟು ರಿಯಾಯಿತಿ ಅವಧಿ ಮತ್ತೆ ವಿಸ್ತರಣೆ ಆಗುತ್ತಾ..? ರಾಜ್ಯ ಸರ್ಕಾರ ರಿಯಾಯಿತಿ ನೀಡಿದ ಬೆನ್ನಲ್ಲೇ ಸಾರಿಗೆ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಿ ಪ್ರಕರಣಗಳಿಂದ ಮುಕ್ತರಾಗ್ತಿದ್ದಾರೆ.

ಕೋಟಿ ಕೋಟಿ ದಂಡ ಸಂಗ್ರಹ ಆಗ್ತಿದೆ. ಮೂರೇ ಮೂರು ದಿನದಲ್ಲಿ 30 ಕೋಟಿ ದಂಡ ವಸೂಲಿ ಆಗಿದೆ. ಇದೇ ಶನಿವಾರ ಅಂದ್ರೆ ಫೆಬ್ರವರಿ 11ರ ತನಕ ವಿನಾಯಿತಿ ಅವಕಾಶ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬಹುದು.

ಸರ್ಕಾರ ನೀಡಿರೋ ಕಾಲಾವಧಿಯಲ್ಲಿ ದಂಡ ಪಾವತಿ ಮಾಡೋದು ಕಷ್ಟ. ಹೀಗಾಗಿ ಮಾರ್ಚ್ 11ರವರೆಗೆ ಅವಧಿ ವಿಸ್ತರಿಸುವಂತೆ ಸವಾರರು ಟ್ವೀಟ್  ಮೂಲಕ ಮನವಿ ಮಾಡಿಕೊಳ್ತಿದ್ದಾರೆ. 

ಸದ್ಯ 1 ಕೋಟಿ 80 ಲಕ್ಷ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಅದರಲ್ಲಿ 3 ದಿನದಲ್ಲಿ ಕೇವಲ 8 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದೆ. ದಂಡ ಪಾವತಿ ವೇಳೆ ಹಲವು ಕಡೆಗಳಲ್ಲಿ ಸರ್ವರ್ ಡೌನ್, ಟೆಕ್ನಿಕಲ್ ಸಮಸ್ಯೆಗಳು ಎದುರಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ