ಬೆಂಗಳೂರಿನಲ್ಲಿ ಜಿ 20 ಶೃಂಗಸಭೆ ಆಯೋಜನೆ

ಭಾನುವಾರ, 5 ಫೆಬ್ರವರಿ 2023 (18:13 IST)
ಭಾರತವು‌ ಪ್ರತಿಷ್ಠಿತ ಜಿ 20 ಶೃಂಗಸಭೆಯನ್ನು ಆಯೋಜನೆ ಮಾಡಿದೆ. ಇದು ಅಂತರಾಷ್ಟ್ರೀಯ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಲಿದೆ ಎಂದು ಕೇಂದ್ರ ಇಂಧನ ಸಚಿವ ಆರ್ .ಕೆ ಸಿಂಗ್ ಹೇಳಿದರು. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಂತರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ  ಈ ಸಭೆಯಲ್ಲಿ ಆಗಲಿದೆ. G20 ಸದಸ್ಯರು ಇದರಲ್ಲಿ ಭಾಗಿಯಾಗಲಿದ್ದಾರೆ.ಉತ್ತಮ ಆಡಳಿತ ರೂಪಿಸಲು ಹಾಗೂ ಬಲಪಡಿಸಲು ಪ್ರಮುಖ ಪಾತ್ರವಹಿಸುತ್ತದೆ. ಇಂಧನ ಪರಿವರ್ತನೆ ಕಾರ್ಯತಂಡ ಕೆಲ ಕ್ಷೇತ್ರಗಳಿಗೆ ಆಧ್ಯತೆ ನೀಡಿದೆ. ಇಂಧನ ಪರಿವರ್ತನೆಗಾಗಿ ಕಡಿಮೆ ವೆಚ್ಚ ಮಾಡುವುದು. ಕಾರ್ಬನ್ ಹೊರಸೂಸುವಿಕೆಯಲ್ಲಿ ಪರಿವರ್ತನೆ ತರುವುದು ಸೇರಿದಂತೆ ಅನೇಕ ವಿಷಯಗಳು ಮತ್ತು ಬದಲಾವಣೆ ಆಗಲಿವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ