ಸಿಎಂ ಬಿ.ಎಸ್.ಯಡಿಯೂರಪ್ಪಗೆ ಘೇರಾವ್

ಶುಕ್ರವಾರ, 4 ಅಕ್ಟೋಬರ್ 2019 (18:12 IST)
ಗಡಿ ಜಿಲ್ಲೆ ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ವಿರುದ್ಧ ರೈತರು ಧಿಕ್ಕಾರ ಕೂಗಿದ್ದಾರೆ. ಸರ್ಕಾರ- ಸಿಎಂ ವಿರುದ್ಧ ಘೋಷಣೆ ಕೂಗಿರುವ ಬೆಳೆಗಾರರು, ಬೊಬ್ಬೆ ಹೊಡೆದುಕೊಂಡು ಸಂಸದರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಪ್ರವಾಹದಿಂದ ಆದ ಬೆಳೆಹಾನಿ ಪರಿಹಾರ ಕೊಡುವಂತೆ ಆಗ್ರಹಿಸಿ ಬೆಳಿಗ್ಗೆ ಬೆಳಗಾವಿಯ ಪ್ರವಾಸಿ ಮಂದಿರದ ಬಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಘೇರಾವ್ ಹಾಕಲು ರೈತರು ಬಂದಿದ್ದರು. ಆದರೆ ಘೇರಾವ್ ಹಾಕಲು ಬಂದಿದ್ದ ರೈತರನ್ನು ತಡೆದು ಪೊಲೀಸರು ಬಂಧಿಸಿದರು.

ಪ್ರವಾಹಕ್ಕೆ ನಾಶವಾದ ಬೆಳೆಗೆ ಪರಿಹಾರ ನೀಡುವಂತೆ ರೈತರ ನಿಯೋಗ ಸಿಎಂ ಭೇಟಿ ಮಾಡಿತ್ತು. ರೈತರಿಗೆ ಸಿಎಂ‌ ಕಡೆಯಿಂದ ಸಮರ್ಪಕ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಸಿಎಂ ಹೋದಲೆಲ್ಲ ಘೇರಾವ್ ಹಾಕಲು ರೈತರು ತೀರ್ಮಾನಿಸಿದ್ದರು. ಬೆಳಿಗ್ಗೆ ಸಾರ್ವಜನಿಕ ಅಹವಾಲು ಸ್ವೀಕಾರ ಬಳಿಕ ಸಿಎಂ ಅಥಣಿ ತಾಲೂಕಿಗೆ ಪ್ರಯಾಣ ಬೆಳೆಸುವ ವೇಳೆ ಪ್ರವಾಸಿ ಮಂದಿರದ ಗೇಟ್ ಬಳಿ ರೈತರು‌ ಅಡ್ಡ ಮಲಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ರೈತರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ.‌

ಸಿಎಂ ವಾಹನಕ್ಕೆ ರೈತರು ಮುತ್ತಿಗೆ ಹಾಕುತ್ತಿದ್ದಂತೆ ರೈತರನ್ನು ಎಳೆದಾಡಿ ಪೊಲೀಸರು ‌ಬಂಧಿಸಿದರು. ಬಳಿಕ ರೈತರನ್ನು‌ ಬಂಧಿಸಿ ಎಪಿಎಂಸಿ ‌ಠಾಣೆಗೆ ಕರೆ ತಂದರು.

ಎಪಿಎಂಸಿ ಠಾಣೆಯಲ್ಲಿರುವ ರೈತರು, ಸರ್ಕಾರ- ಸಿಎಂ ವಿರುದ್ಧ ಘೋಷಣೆ ಕೂಗಿದ್ರು. ಬೊಬ್ಬೆ ಹೊಡೆದುಕೊಂಡು ಸಂಸದರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರೈತರು ಧಿಕ್ಕಾರ ಕೂಗಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ