ರಕ್ತದಲ್ಲಿ ಚಿತ್ರ ಬಿಡಿಸಿ ಡಿಕೆಶಿಗೆ ಗಿಫ್ಟ್

ಸೋಮವಾರ, 15 ಮೇ 2023 (17:33 IST)
KPCC ಅಧ್ಯಕ್ಷ ಡಿ.ಕೆ ಶಿವಕುಮಾರ್​​​​ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿ, ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡ ತಮ್ಮ ರಕ್ತದಲ್ಲೇ ಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಭಾವಚಿತ್ರವನ್ನು ಮಾಡುವ ವಿಡಿಯೋ ಕೂಡ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್​​ಗೆ ಬಹುಮತ ಬಂದಿದ್ದು, ಸಿಎಂ ಆಯ್ಕೆ ಕಸರತ್ತು ನಡೆದಿದೆ. KPCC ಅಧ್ಯಕ್ಷರಾಗಿದ್ದವರೇ ಸಿಎಂ ಆಗುವ ಪರಿಪಾಠ ಕಾಂಗ್ರೆಸ್​​ನಲ್ಲಿ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿಯವರೇ ಸಿಎಂ ಆಗಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ