ಮುಖ್ಯಮಂತ್ರಿ ಪುತ್ರ ಯತೀಂದ್ರಗೆ ಘೇರಾವ್

ಭಾನುವಾರ, 18 ಫೆಬ್ರವರಿ 2018 (17:56 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರಿಗೆ ಗೆಜ್ಜಗಳ್ಳಿಯಲ್ಲಿ ಘೇರಾವ್ ಹಾಕಲಾಗಿದೆ.
 
ಡಾ.ಯತೀಂದ್ರ ಅವರು ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಗೆಜ್ಜಗಳ್ಳಿಯಲ್ಲಿ ಇಂದು 15 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಯೊಂದಕ್ಕೆ ಗುದ್ದಲಿ ಪೂಜೆ ನೆರವೇರಿಸಲು ತೆರಳಿದಾಗ ಈ ಘಟನೆ ನಡೆದಿದೆ.
 
ಚುನಾವಣಾ ಸಂದರ್ಭದಲ್ಲಿ ಗುದ್ದಲಿ ಪೂಜೆ ನೀವೇಕೆ ಮಾಡಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಯತೀಂದ್ರ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಜೆಡಿಎಸ್‍ನವರು ಯತೀಂದ್ರ ಅವರಿಗೆ ಗುದ್ದಲಿಪೂಜೆ ನಡೆಸದಂತೆ ಘೆರಾವ್ ಹಾಕಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ