ಬಾಲಕಿ ಚಾಮರಾಜಪೇಟೆಯಲ್ಲಿರುವ ಕಾಲೇಜಿನಲ್ಲಿ ಓದುತ್ತಿದ್ದು, ಅನ್ಯಧರ್ಮದ ಫರ್ಹಾನ್‌ನನ್ನು ಪ್ರೀತಿಸುತ್ತಿದ್ದಳು. ಆದರೆ,ಯುವಕ ಬೇರೆ ಧರ್ಮಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಆತನೊಂದಿಗೆ ವಿವಾಹ ಮಾಡಿಕೊಡಲು ಪೋಷಕರು ನಿರಾಕರಿಸಿದ್ದರು.
ಪೋಷಕರು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಲು ಅನುಮತಿ ನೀಡುವುದಿಲ್ಲ ಎನ್ನುವುದು ತಿಳಿದ ಬಾಲಕಿ, ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ಆದರೆ, ಪೋಷಕರಿಗೆ ಹೆದರಿ ಪ್ರೀಯಕರನ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಳು.