ಮುಟ್ಟಿನ ಹೊಟ್ಟೆ ನೋವು ಸಹಿಸಲಾಗದೆ ಆತ್ಮಹತ್ಯೆ ಶರಣಾದ ಬಾಲಕಿ
ವಿಜಯಲಕ್ಷ್ಮಿ ಎಂಬಾಕೆ ಆತ್ಮಹತ್ಯೆಗೆ ಶರಣಾದ ಬಾಲಕಿ. ಕೆರೂರು ಪಟ್ಟಣದಲ್ಲಿ ಅಜ್ಜಿಯೊಂದಿಗೆ ಮನೆಯಲ್ಲಿ ವಾಸವಾಗಿದ್ದ ಈಕೆ ಖಾಸಗಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಳು. ಈಕೆಗೆ ಪ್ರತಿತಿಂಗಳು ಋತು ಚಕ್ರದ ಸಮಯದಲ್ಲಿ ಹೊಟ್ಟೆ ನೋವು ಬರುತ್ತಿದ್ದು, ಈ ಹೊಟ್ಟೆನೋವನ್ನು ತಾಳಲಾರದೆ ಮನನೊಂದು ಅಜ್ಜಿ ಊರಿಗೆ ತೆರಳಿದ್ದ ವೇಳೆಯಲ್ಲಿ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.