ಕೆಲಸದ ಕಚೇರಿಯಲ್ಲಿ ಯುವತಿ ಆತ್ಮಹತ್ಯೆ

ಗುರುವಾರ, 3 ಫೆಬ್ರವರಿ 2022 (16:52 IST)
ಕೆಲಸ ಮಾಡುತಿದ್ದ ಕಚೇರಿಯಲ್ಲಿ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ನಾರಾಯಣಪುರದ ಟೈಲ್ಸ್ ಅಂಗಡಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಟೈಲ್ಸ್ ಅಂಗಡಿಯ ಕಚೇರಿಯಲ್ಲಿ ಕೆಲಸ ಮಾಡುತಿದ್ದ ಮೀನಾಕ್ಷಿ(21) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ನನ್ನ ಸಾವಿಗೆ ಯಾರು ಕಾರಣ ಅಲ್ಲ ಎಂದು ಉಲ್ಲೇಖಿಸಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್‍ನಲ್ಲಿ ತಿಳಿಸಿದ್ದಾರೆ. ಆದರೆ ಮೃತ ಯುವತಿಯ ಕುಟುಂಬಸ್ಥರು ಟೈಲ್ಸ್ ಅಂಗಡಿಯವರ ವಿರುದ್ಧ ಕೊಲೆ ಆರೋಪ ಮಾಡಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ