ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕು ಪತ್ರ ಕೊಡಿ

ಶುಕ್ರವಾರ, 14 ಡಿಸೆಂಬರ್ 2018 (20:41 IST)
40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕು ಪತ್ರಗಳನ್ನು ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಹಾವೇರಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರಕಾಶ ಬಾರ್ಕಿ ಹಾವೇರಿಯಲ್ಲಿ ಈ ಒತ್ತಾಯ ಮಾಡಿದ್ದಾರೆ. 1084 ಎಕ್ರೆ ಸರ್ಕಾರಿ ಭೂಮಿಯ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿದನ್ನು ಖಂಡಿಸುತ್ತೇವೆ ಎಂದು ಹೇಳಿದರು.  57/58 ಫಾರ್ಮ್ ನಡಿ ಎಲ್ಲ ಭೂ ರಹಿತ ರೈತರ ಅರ್ಜಿಯನ್ನ ಪಡೆಯಬೇಕು. ಇನ್ನೂ ರೈತರ ಬೆಳೆ ಸಾಲಮನ್ನಾ ಘೋಷಣೆ ಹಿನ್ನಲೆಯಲ್ಲಿ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಯಿಂದ ಋಣ ಮುಕ್ತ ಪತ್ರವನ್ನ ರೈತರಿಗೆ ಕೊಡಿಸಬೇಕು.  2017-18 ರ ಮುಂಗಾರು ಹಿಂಗಾರು ಬೆಳೆ ವಿಮಾ ಪರಿಹಾರ ರೈತರಿಗೆ ದೊರೆತಿಲ್ಲ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು.

ರಾಜ್ಯದ ಸಮಗ್ರ ರೈತರ ಅಭಿವೃದ್ಧಿಯನ್ನ ಕಡೆಗಣಿಸಿದ ಕೇಂದ್ರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಹಾವೇರಿ ಜಿಲ್ಲೆಯ ಕೆರೆಗಳು ಅಭಿವೃದ್ಧಿ ಕಾಣದೆ ನೂರಾರು ವರ್ಷಗಳೆ ಕಳದಿವೆ. ಕೆರೆ ಒತ್ತುವರಿಯಾದರೂ ಕೂಡಾ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ