ಬೆಂಗಳೂರು : ಹುರಿಗಡಲೆ ತಿನ್ನಲು ಬಹು ರುಚಿಕರವಾಗಿರುತ್ತದೆ. ಇಂತಹ ರುಚಿಕರವಾದ ಹುರಿಗಡಲೆಯಿಂದ ಸಿಹಿಯಾದ ಸ್ವೀಟ್ ಕೂಡ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು : ಹುರಿಗಡಲೆ 1 ಕಪ್, ಬೆಲ್ಲದ ಪುಡಿ 1 ಕಪ್, ಒಣ ಕೊಬ್ಬರಿ ತುರಿ ½ ಕಪ್, ತುಪ್ಪ 1 ಚಮಚ, ಏಲಕ್ಕಿ ಮತ್ತು ಲವಂಗ ಪುಡಿ, ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ.
ಮಾಡುವ ವಿಧಾನ : ಹುರಿಗಡಲೆಯನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿ ಹುರಿದುಕೊಳ್ಳಿ. ಅದಕ್ಕೆ ಬೆಲ್ಲದ ಪುಡಿ , ನೀರು ಸೇರಿಸಿ ಪಾಕ ತಯಾರಿಸಿಕೊಳ್ಳಿ. ಅದಕ್ಕೆ ಹುರಿಗಡಲೆ ಹಿಟ್ಟು ಮತ್ತು ಒಣ ಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಕೆಳಗಿಳಿಸಿ ಬಿಸಿ ಇರುವಾಗಲೇ ಅದಕ್ಕೆ ಏಲಕ್ಕಿ ಮತ್ತು ಲವಂಗ ಪುಡಿ ಸೇರಿಸಿ ತುಪ್ಪ ಸವರಿದ ಪಾತ್ರೆಗೆ ಸುರಿದು ಆರಲು ಬಿಡಿ. ತಣ್ಣಗಾದ ಬಳಿಕ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.