ಮಹಿಷನೆಂಬ ದೆವ್ವವನ್ನು ದೇವರು ಮಾಡುತ್ತಿದ್ದಾರೆ: ಪ್ರತಾಪ್ ಸಿಂಹ ಆಕ್ರೋಶ

Sampriya

ಭಾನುವಾರ, 29 ಸೆಪ್ಟಂಬರ್ 2024 (10:58 IST)
Photo Courtesy X
ಮೈಸೂರು: ಮಹಿಷ ಮಂಡಲೋತ್ಸವ ವರ್ಸಸ್ ಚಾಮುಂಡಿ ಚಲೋ ನಡುವಿನ ಸಂಘರ್ಷದಿಂದಾಗಿ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿಯು ಇಂದು ಆಚರಣೆಗೆ ಕರೆ ನೀಡಿದ್ದರಿಂದ ಈ ವೇಳೆ ಘರ್ಷಣೆಯಾಗುವ ಹಿನ್ನೆಲೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಮಹಿಷಾ ದಸರಾ ಆಚರಣೆ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಪುರಭವನದ ಹೊರಾವರಣದಲ್ಲಿ ಮಹಿಷಮಂಡಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಇನ್ನೂ ಮಹಿಷಾ ದಸರಾ ಆಚರಣೆಗೆ ಮಾಜಿ ಸಂಸದ ಪ್ರತಾ‍ಪ್ ಸಿಂಹ್ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಬೆಟ್ಟದಲ್ಲಿ ಮಹಿಷನಿಗೆ ಪುಷ್ಪಾರ್ಷನೆ, ಬನ್ನಿ ನೋಡೇ ಬಿಡೋಣ ಎಂದು ಸವಾಲು ಹಾಕಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಪ್ರತಾಪ್ ಸಿಂಹ್ ಅವರು, ಮಹಿಷನೆಂಬ ದೆವ್ವವನ್ನು ದೇವರು ಮಾಡಲು, ದೇವಿಯನ್ನು ದೆವ್ವಮಾಡಲು ಇವರು ಹೊರಟಿದ್ದಾರೆ? ಇನ್ನೊಬ್ಬರ ನಂಬಿಕೆಗೆ, ಭಾವನೆಗೆ ನೋವುಂಟು ಮಾಡಲು ಸಂವಿಧಾನದ ಯಾವ ಭಾಗದಲ್ಲಿ ಅವಕಾಶವಿದೆ? ಮಹಿಷನ ಫೋಟೋವನ್ನು ಮನೆಯಲ್ಲಿಟ್ಟುಕೊಂಡು, ನಿನ್ನಂಥ ಮಗನನ್ನು ಕೊಡು ಎಂದು ನೀವು ನಿತ್ಯ ಆರಾಧನೆ ಮಾಡಲು ನಮ್ಮ ತಕರಾರು ಏನೂ ಇಲ್ಲ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ