ಬೆಂಗಳೂರು : ಕಾನೂನುಬಾಹಿರವಾಗಿ ಮತದಾರರ ಗೌಪ್ಯ ಮಾಹಿತಿ ಸಂಗ್ರಹಿಸಿದ ಆರೋಪ ಎದುರಿಸ್ತಿರೋ ಚಿಲುಮೆ ಸಂಸ್ಥೆ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲೂ ಹಸ್ತಕ್ಷೇಪ ನಡೆಸಿರೋ ಅನುಮಾನಗಳು ವ್ಯಕ್ತವಾಗಿವೆ.
ಹಗರಣದ ತನಿಖೆಯ ಸುಳಿವರಿತ ಬಿಬಿಎಂಪಿ ಚಿಲುಮೆಗೆ ನವೆಂಬರ್ 2ರಂದು ನೊಟೀಸ್ ನೀಡಿತ್ತು. ಇದಾದ 10 ದಿನಗಳಿಗೆ (ನ.13) ಕಚೇರಿಗಳ ಬಾಗಿಲು ಬಂದ್ ಮಾಡಿದೆ. 3 ತಿಂಗಳಿಗೆ ಅಗ್ರಿಮೆಂಟ್ ಇದ್ರು 2 ತಿಂಗಳಿಗೆ ಬಸವನಗುಡಿ ಕಚೇರಿಯನ್ನು ಖಾಲಿ ಮಾಡಿದೆ.
ನಂತರ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ನಡೆಸಿರುವ ಹಲಸೂರು ಗೇಟ್ ಪೊಲೀಸರು, ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದ್ದಾರೆ. ನಾಲ್ವರು ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ, ಚಿಲುಮೆಯ ಮುಖ್ಯಸ್ಥರು ಇನ್ನೂ ಸಿಕ್ಕಿಬಿದ್ದಿಲ್ಲ.
ಚಿಲುಮೆ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ತನಿಖಾಧಿಕಾರಿಯನ್ನು ನೇಮಿಸಿರೋ ಮುಖ್ಯ ಚುನಾವಣಾಧಿಕಾರಿ, ವರದಿಗೆ ಸೂಚಿಸಿದ್ದಾರೆ. ಈ ಮಧ್ಯೆ, ಬಿಬಿಎಂಪಿ ಕೂಡ, ಮಹದೇವಪುರ ಕಂದಾಯಾಧಿಕಾರಿ ಚಂದ್ರಶೇಖರ್ ಅವರನ್ನ ಅಮಾನತು ಮಾಡಿದೆ.