ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

Sampriya

ಶುಕ್ರವಾರ, 31 ಅಕ್ಟೋಬರ್ 2025 (18:10 IST)
Photo Credit X
ಮೈಸೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್‌ 1ರಂದು 12ವರ್ಷದೊಳಗಿನ ಮಕ್ಕಳಿಗೆ ಚಾಮರಾಜೇಂದ್ರ ಮೃಗಾಲಯಕ್ಕೆ ಉಚಿತ ಪ್ರವೇಶವಿರಲಿದೆ. 

ಈ ವಿಚಾರವನ್ನು ಕಾರ್ಯನಿರ್ವಾಹಕ ನಿರ್ದೇಶಕಿ ಅನುಷಾ ಪಿ ಅವರು ತಿಳಿಸಿದ್ದಾರೆ. 

ಅದರಂತೆ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ಉಚಿತ ಪ್ರವೇಶವಿರಲಿದೆ. ಇನ್ನೂ ಮಕ್ಕಳೊಂದಿಗೆ ಬರುವ ಪೋಷಕರು, ಶಿಕ್ಷಕರು ಪ್ರವೇಶದ ಶುಲ್ಕವನ್ನು ಭರಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

ಮೈಸೂರು ಮೃಗಾಲಯ ಕರ್ನಾಟಕದ ಅತ್ಯಂತ ಜನಪ್ರಿಯ ಮೃಗಾಲಯವಾಗಿದೆ ಮತ್ತು ಇದು ಭಾರತದ ಅತ್ಯಂತ ಹಳೆಯ ಪ್ರಾಣಿಸಂಗ್ರಹಾಲಯವಾಗಿದೆ. ಮೈಸೂರು ಮೃಗಾಲಯವು 168 ವಿವಿಧ ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. 







ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ