ಭಾರತದಲ್ಲಿ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ತಯಾರಿಕೆ ಆರಂಭಿಸಿದ ಗೂಗಲ್
ಟೆಕ್ ದೈತ್ಯ ಗೂಗಲ್ ತನ್ನ ಮೇಡ್ ಇನ್ ಇಂಡಿಯಾ ಕ್ರೋಮ್‌ಬುಕ್ ಲ್ಯಾಪ್‌ಟಾಪ್‌ಗಳು ಪರ್ಸನಲ್ ಕಂಪ್ಯೂಟರ್ ಉತ್ಪಾದನೆಗಳ ವಿಚಾರದಲ್ಲಿ ದೈತ್ಯರಾಗಿರುವ ಎಚ್‌ಪಿ ಕಂಪನಿಯ ಜೊತೆ ಸೇರಿ ತಯಾರಿಸಲು ಆರಂಭಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇಂಡಿಯಾ ಕಾರ್ಯಕ್ರಮದ ನಿಟ್ಟಿನಲ್ಲಿ ದೊಡ್ಡ ಬೂಸ್ಟ್ ಕೊಡುವಂಥ ವಿಚಾರವಾಗಿದೆ. 'ಭಾರತದಲ್ಲಿ ಕ್ರೋಮ್‌ಬುಕ್ಸ್ ತಯಾರಿಸಲು ನಾವು ಎಚ್‌ಪಿ ಜೊತೆ ಪಾಲುದಾರರಾಗಿದ್ದೇವೆ. ಇವುಗಳು ಭಾರತದಲ್ಲಿ ತಯಾರಿಸಲಾದ ಮೊದಲ ಕ್ರೋಮ್‌ಬುಕ್ಸ್ ಆಗಿದ್ದು, ಭಾರತೀಯ ವಿದ್ಯಾರ್ಥಿಗಳು ಕೈಗೆಟುಕುವ ಮತ್ತು ಸುರಕ್ಷಿತ ಕಂಪ್ಯೂಟರ್ ಹೊಂದಲು ಇದು ಸಹಾಯ ಮಾಡುತ್ತದೆ' ಎಂದು ಗೂಗಲ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.