ಸರ್ಕಾರಿ ನೌಕರರ ಪ್ರೊಟೆಸ್ಟ್ 2ನೇ ದಿನಕ್ಕೆ
NPS ನ್ಯೂ ಪೆನ್ಷನ್ ಸ್ಕೀಂ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಬೃಹತ್ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟದೆ. ಚಳಿಯನ್ನು ಕೂಡ ಲೆಕ್ಕಿಸದೆ ರಾತ್ರಿಯಿಡಿ ನೌಕರರು ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ. ನಿಗಮ ಮಂಡಳಿಗಳಲ್ಲಿ ಕೆಲಸ ಮಾಡುತ್ತಿರುವ 3 ಲಕ್ಷ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಜಾರ್ಖಂಡ್, ಛತ್ತೀಸ್ ಗಢ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ NPS ರದ್ದು ಪಡಿಸಲಾಗಿದ್ದು ಕರ್ನಾಟಕದಲ್ಲಿ ಮಾತ್ರ NPS ರದ್ದು ಪಡಿಸುತ್ತಿಲ್ಲ. ಬೇಡಿಕೆ ಈಡೇರಿಕೆ ಆಗೋವರೆಗೂ ಮನೆಗೆ ಹೋಗಲ್ಲ ಅಂತ ಸರ್ಕಾರಿ ನೌಕರರು ಪಟ್ಟು ಹಿಡಿದು ಕುಳಿತಿದ್ದಾರೆ.