ಕರ್ನಾಟಕದಲ್ಲಿ ಸುಮಾರು 5 ಲಕ್ಷ ಜನ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡ್ತಿಕೊಂಡಿದ್ದು, ಬೆಂಗಳೂರಿನ ನಗರದ್ಯಾಂತ ಒಂದೂವರೆ ಲಕ್ಷ ಜನರು ಬೀದಿ ಬದಿ ವ್ಯಾಪಾರ ಮಾಡ್ತಾ ಜೀವನ ಸಾಗಿಸುತ್ತಿದ್ದಾರೆ,ಅಂತಾದ್ರಲ್ಲಿ ಕೇಂದ್ರ ಸರ್ಕಾರದ ಅನುದಾನದ ಯೋಜನೆಗಳನ್ನು ಕೊಟ್ಟರೆ ರಾಜ್ಯಸರ್ಕಾರ ಮಾತ್ರ ಸಂಪೂರ್ಣ ವಿಫಲವಾಗಿದೆ .ಪ್ರತಿ ಒಬ್ಬ ಬೀದಿ ಬದಿ ವ್ಯಾಪಾರಿಗೆ ಲೋನ್ ಕೊಡುವಲ್ಲಿ ಬ್ಯಾಂಕ್ ವಿಫಲವಾಗಿವೆ.ಬೀದಿ ಬದಿ ವ್ಯಾಪಾರಿಗಳಿಗೆ ಸಮೀಕ್ಷೆ ನಡೆಸಿ ಐಡು ಕಾರ್ಡ್ ಕೋಡಲು ಸರ್ಕಾರ ಸಂಪೂರ್ಣ ವಿಫಲ.ಮಾರ್ಕೆಟ್ ಅಭಿವೃದ್ಧಿ ಮಾಡಲು ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೀದಿಬದಿ ವ್ಯಾಪಾರ ಮಾಲೀಕರ ಸಂಘದ ಅಧ್ಯಕ್ಷ ರಂಗಸ್ವಾಮಿಯವರು ಹರಿಹಾಯ್ದಿದ್ದಾರೆ.