ಜಾರಕಿಹೊಳಿ ಕುಟುಂಬದಿಂದ ಸರಕಾರಕ್ಕೆ ಧಕ್ಕೆಯಿಲ್ಲ-.ಎಸ್.ಈಶ್ವರಪ್ಪ

ಗುರುವಾರ, 22 ಆಗಸ್ಟ್ 2019 (12:14 IST)
ವಿಜಯಪುರ : ಜಾರಕಿಹೊಳಿ ಕುಟುಂಬ ಬಿಜೆಪಿ ಸರ್ಕಾರವನ್ನು ಉರುಳಿಸುತ್ತೆ ಎಂಬ ಮಾತು ಕೇಳಿಬಂದ ಹಿನ್ನಲೆಯಲ್ಲಿ ಜಾರಕಿಹೊಳಿ ಕುಟುಂಬದಿಂದ ಸರಕಾರಕ್ಕೆ ಧಕ್ಕೆಯಿಲ್ಲ ಎಂದು ನೂತನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಶೀಘ್ರವೇ ಸಚಿವ ಸ್ಥಾನ ಸಿಗಲಿದೆ. ಹೀಗಾಗಿ ನಾವು ಯಾರು ಸರ್ಕಾರಕ್ಕೆ ಧಕ್ಕೆ ಮಾಡಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹಾಗಾಗಿ ಉಮೇಶ್ ಕತ್ತಿ ಸೇರಿದಂತೆ ಯಾರೂ ಕೂಡ ಸರ್ಕಾರ ಕೆಡವಲು ಪ್ರಯತ್ನಿಸುವುದಿಲ್ಲ ಎಂದು ಹೇಳಿದ್ದಾರೆ.


ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ನೇಮಕಗೊಂಡಿರುವ ಬಗ್ಗೆ ಬಸವನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ನಳಿನ್ ಕುಮಾರ್ ಮುನ್ನಡೆಸುತ್ತಾರೆ. ಅವರಿಗೆ ಎಲ್ಲ ಭಾಗದ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇನು ಇಡೀ ದೇಶ ಸುತ್ತಿದ್ದಾರೆಯೇ? ಅವರು ದೇಶದ ಎಲ್ಲಾ ಜನರಿಗೂ ಗೊತ್ತಿಲ್ಲವೇ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ