ಸಾರಿಗೆ ನೌಕರರ ವಿರುದ್ಧ ಎಸ್ಮಾ ಹೇರಲು ಸರಕಾರ ನಿರ್ಧಾರ: ರಾಮಲಿಂಗಾರೆಡ್ಡಿ

ಶನಿವಾರ, 23 ಜುಲೈ 2016 (16:41 IST)
ಸಾರಿಗೆ ನೌಕರರು ಜುಲೈ 25 ರಿಂದ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮುಷ್ಕರ ನಡೆಸುವ ನೌಕರರ ಮೇಲೆ ಎಸ್ಮಾ ಕಾಯ್ದೆ ಬಳಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರ ನಡೆಸುವ ನೌಕರರ ಮೇಲೆ ಎಸ್ಮಾ ಕಾಯ್ದೆ ಬಳಸಲು ಸರಕಾರ ನಿರ್ಧರಿಸಿದೆ. ಯಾವುಗೇ ಕಾರಣಕ್ಕೂ ವೇತನ ಪರಿಷ್ಕರಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 
ಸಾರಿಗೆ ನೌಕರರ ಸಂಘದ ಬೇಡಿಕೆಯಂತೆ 35 ಪ್ರತಿಶತ ವೇತನ ಪರಿಷ್ಕರಣೆ ಮಾಡಿದರೆ ರಾಜ್ಯ ಸರಕಾರಕ್ಕೆ 5 ಸಾವಿರ ಕೋಟಿ ಹೊರೆಯಾಗುತ್ತದೆ. ಒಂದು ದಿನ ನೌಕರರು ಮುಷ್ಕರ ನಡೆಸಿದರೆ 15 ಕೋಟಿ ನಷ್ಟ ಸಂಭವಿಸುತ್ತದೆ. ನೌಕರರ ವೇತನವನ್ನು 35 ಪ್ರತಿಶತ ಹೆಚ್ಚಳ ಮಾಡಿದ್ರೆ ಇನ್ನಷ್ಟು ದಿವಾಳಿಯಾಗುತ್ತದೆ ಎಂದು ತಿಳಿಸಿದರು.
 
ವೇತನ ಪರಿಷ್ಕರಣೆ ಕುರಿತು ಸಾರಿಗೆ ನೌಕರರ ಸಂಘದ ಜೊತೆ ಮತ್ತೆ ಚರ್ಚೆ ನಡೆಸುವ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ