ಸಚಿವರ ಕಾರು ಖರೀದಿಗಾಗಿ ಸರಕಾರದಿಂದ ದುಂದುವೆಚ್ಚ

ಗುರುವಾರ, 4 ಆಗಸ್ಟ್ 2016 (12:29 IST)
ಸಚಿವರ ಕಾರು ಖರೀದಿಗಾಗಿ ರಾಜ್ಯ ಸರಕಾರ ದುಂದು ವೆಚ್ಚ ಮಾಡುತ್ತಿದ್ದು, ಇಲ್ಲಿಯವರೆಗೂ 9.34 ಕೋಟಿ ರೂಪಾಯಿ ದುಂದು ವೆಚ್ಚ ಮಾಡಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
 
ರಾಜ್ಯ ಸರಕಾರದ ವತಿಯಿಂದ ಸಚಿವರಿಗಾಗಿ 55 ಇನ್ನೋವಾ ಕಾರುಗಳು ಹಾಗೂ ಒಂದು ಫಾರ್ಚೂನರ್ ಸೇರಿದಂತೆ 57 ಕಾರುಗಳನ್ನು ಖರೀದಿ ಮಾಡಿದೆ. ಆದರೆ, ರಾಜ್ಯ ಸಚಿವರು ಸರಕಾರದ ನಿಯಮವನ್ನು ಮೀರಿ ಪ್ರಯಾಣ ಭತ್ತೆಯನ್ನು ಪಡೆಯುತ್ತಿದ್ದಾರೆ ಎಂದು ಭೀಮಪ್ಪ ಗಡಾದ ಆರೋಪಿಸಿದ್ದಾರೆ.
 
ಸಚಿವರ ಎಸಿ ಕಾರುಗಳ ಪ್ರಯಾಣದ ಭತ್ಯೆಯನ್ನು ರಾಜ್ಯ ಸರಕಾರ ಪ್ರತಿ ಕಿಲೋ ಮೀಟರ್‌ಗೆ 19.50 ಪೈಸೆ ನಿಗದಿ ಪಡಿಸಿದೆ. ಆದರೆ, ಸಚಿವರು ಪ್ರತಿ ಕಿಲೋ ಮೀಟರ್‌ಗೆ 30 ರೂಪಾಯಿ ಪ್ರಯಾಣ ಭತ್ಯೆಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 
ರಾಜ್ಯ ಸಚಿವರು ಪ್ರಯಾಣದ ನಿಗದಿತ ದರಕ್ಕಿಂತ ಹೆಚ್ಚಿನ ಭತ್ಯೆಯನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುವ ಕುರಿತು ನಿರ್ಧರಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ