ಈಶ್ವರಪ್ಪ ಅವರ ರಾಜೀನಾಮೆ ಕೇಳುವುದು ಮಾತ್ರ ನಮ್ಮ ಉದ್ದೇಶವಲ್ಲ. ಈ ಸರ್ಕಾರ 40 % ಕಮಿಷನ್ ಪಡೆಯುತ್ತಿದೆ. ಹೀಗಾಗಿ ಈ ಸರ್ಕಾರವನ್ನು ಕಿತ್ತು ಬೀಸಾಕಬೇಕಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳು ನಾನೊಂದು ಸುದ್ದಿಗೋಷ್ಠಿ ಮಾಡಿದ್ದೆ. ದೇವರಾಜು ಅರಸು ನಿಗಮದಲ್ಲಿ, ಅಂಬೇಡ್ಕರ್ ನಿಗಮದಲ್ಲಿ ಬೋರ್ ವೆಲ್'ಗಳನ್ನು ಕೊರೆಸುವುದರಲ್ಲಿ ಕಮಿಷನ್ ನಡೆಯುತ್ತಿದೆ ಅಂದು ಆರೋಪ ಮಾಡಿದ್ದೆ. ನಾನು ಆರೋಪಿಸಿದ ಬಳಿಕ ತನಿಖೆಗೆ ಆದೇಶ ಮಾಡಿದ್ದಾರೆ, ಆದರೆ ಬೋರ್'ವೆಲ್ ಕೊರೆಯುವುದನ್ನು ನಿಲ್ಲಿಸಿಲ್ಲ ಕೆಲಸ ನಿಲ್ಲಿಸದೇ ಹೇಗೆ ತನಿಖೆ ಮಾಡುತ್ತಿದ್ದಾರೆ..? ಕೋಟಾ ಶ್ರೀನಿವಾಸ ಪೂಜಾರಿ ಭ್ರಷ್ಟರಲ್ಲ ಎಂದುಕೊಂಡಿದ್ದೆ. ಈ ಕೆಲಸದಲ್ಲಿ ನಿಮಗೆ ಎಷ್ಟು ಕಿಕ್'ಬ್ಯಾಕ್ ಬರುತ್ತಿದೆ? ಕಿಕ್'ಬ್ಯಾಕ್ ಸಿಗದಿದ್ದರೆ ಕೆಲಸವನ್ನು ಯಾಕೆ ನಿಲ್ಲಿಸಿಲ್ಲ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.