ಐಟಿ ಅಧಿಕಾರಿಗಳ ವಿರುದ್ಧವೇ ಕೇಸ್ ದಾಖಲಿಸಿದ ಗೋವಿಂದರಾಜು

ಶುಕ್ರವಾರ, 3 ಮಾರ್ಚ್ 2017 (16:25 IST)
ಕಾಂಗ್ರೆಸ್ ಹೈಕಮಾಂಡ್`ಗೆ ರಾಜ್ಯ ಕಾಂಗ್ರೆಸ್ ನಾಯಕರು ಕಪ್ಪ ನೀಡಿದ್ದಾರೆನ್ನಲಾದ ಡೈರಿ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ನನ್ನ ಮನೆಯಲ್ಲಿ ಡೈರಿ ಸಿಕ್ಕಿಯೇ ಇರಲಿಲ್ಲ ಎನ್ನುತ್ತಿದ್ದಾರೆ ಗೋವಿಂದರಾಜು.


ಮಹತ್ವದ ಬೆಳವಣಿಗೆಯೊಂದರಲ್ಲಿ ಎಂಎಲ್`ಸಿ ಗೋವಿಂದರಾಜು, ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದು, ಐಟಿ ಅಧಿಕಾರಿಗಳೇ ಆ ಡೈರಿಯನ್ನ ಇಟ್ಟಿದ್ದಾರೆ ಎಂದು ಇಬ್ಬರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಈ ಸಂಬಂಧ ಎಫ್ ಐಆರ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.

ಸಿಎಂ ಸಿದ್ದರಾಮಯ್ಯ ಹೈಕಮಾಂಡ್`ಗೆ ಕಪ್ಪ ನೀಡಿದ್ದಾರೆ. ಐಟಿ ದಾಳಿ ವೇಳೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಈ ಬಗ್ಗೆ ಬರೆಯಲಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದರು. ಇದಾದ ಕೆಲ ದಿನಗಳ ಬಳಿಕ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಡೈರಿ ಬಹಿರಂಗವಾಗಿತ್ತು. ಡೈರಿಯ ಲ್ಲಿ ಹಣ ಮೊತ್ತ ಪಡೆದ ಮೂಲ ಮತ್ತು ನೀಡಿದವರ ಹೆಸರುಗಳನ್ನ ಇನ್ಷಿಯಲ್`ಗಳ ಮೂಲಕ ಉಲ್ಲೇಖಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ