ಪೌರ ಕಾರ್ಮಿಕರ ಆರೋಗ್ಯ ಚಿಕಿತ್ಸೆ ಭರಿಸಲು ಸರ್ಕಾರ ಚಿಂತನೆ

ಗುರುವಾರ, 15 ಡಿಸೆಂಬರ್ 2016 (07:47 IST)
ರಾಜ್ಯದಲ್ಲಿರುವ ಪೌರಕಾರ್ಮಿಕರ ಆರೋಗ್ಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲು ಚಿಂತನೆ ನಡೆಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು ತಿಳಿಸಿದರು. ರಾಜ್ಯದಲ್ಲಿ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದರು.
 
ಪೌರಕಾರ್ಮಿಕರು ಯಾರು ಮಾಡದಂತಹ ತ್ಯಾಗದ ಕೆಲಸ ಮಾಡುತ್ತಿದಾರೆ ಅವರಿಗೆ ಆರೋಗ್ಯ ಭತ್ಯೆ ಇಲ್ಲ ಹಾಗೂ ರಕ್ಷಣೆ ಸಹ ಇಲ್ಲದಂತಾಗಿದೆ ಎಂದ ಸಚಿವರು ಮ್ಯಾನ್ಹೋಲ್ ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಈವರೆಗೆ ರಾಜ್ಯದಲ್ಲಿ ಸುಮಾರು 602 ಮಂದಿ ಪೌರಕಾರ್ಮಿಕರು ಮೃತಪಟ್ಟಿದ್ದಾರೆ. 
 
ಅದರಲ್ಲಿ ಈವರೆಗೆ ಕೆಲವರಿಗೆ ಮಾತ್ರ ಪರಿಹಾರದ ಹಣ ನೀಡಲಾಗಿದೆ. ಉಳಿದವರಿಗೆ ಪರಿಹಾರ ರೂಪದಲ್ಲಿ ನೀಡುವ 10 ಲಕ್ಷ ರೂ. ಹಣ ನೀಡಿಲ್ಲ ಕೂಡಲೇ ಮೃತ ಪೌರ ಕಾರ್ಮಿಕರಿಗೆ ಪರಿಹಾರದ ಹಣ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ